ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. ಫಾರ್ಮಾ ನಂತರ ಪಿಎಚ್‌.ಡಿ. ಸಾಧ್ಯವೇ?

ನಿಮ್ಮ ಪ್ರಶ್ನೆ – ನಮ್ಮ ಉತ್ತರ
Last Updated 28 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

1. ನಾನು ಡಿ. ಫಾರ್ಮಾ ಮುಗಿಸಿದ್ದೇನೆ. ಮುಂದೆ ಎಂ.ಡಿ., ಎಂ.ಎಸ್. ಮಾಡಬಹುದೇ? ಫಾರ್ಮಾ ಡಿ. ಮುಗಿಸಿರುವವರು ನೇರವಾಗಿ ಪಿಎಚ್‌.ಡಿ. ಮುಗಿಸಬಹುದು ಎಂದು ಆರ್.ಜಿ.ಯು.ಎಚ್.ಎಸ್. ತಿಳಿಸಿದೆ. ಮತ್ತೆ ನಾವು ಯಾವ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು? ನನಗೆ ಮುಂದೆ ದಾರಿ ಯಾವುದು ಎಂಬುದು ತಿಳಿಯುತ್ತಿಲ್ಲ.
-ನಾಗರಾಜ್ ಹೂಗಾ‌ರ್, ಊರು ಬೇಡ

ಉತ್ತರ: ನಾಗರಾಜ್, ನೀವು ಡಿ. ಫಾರ್ಮಾ 6 ವರ್ಷದ ಕೋರ್ಸ್ ತೆಗೆದುಕೊಂಡಾಗ ಯಾವ ಗುರಿ ಇಟ್ಟುಕೊಂಡು ಸೇರಿದಿರಿ? ಈಗ ಕೋರ್ಸ್ ಮುಗಿಸಿದ ಮೇಲೆ ಏನು ಮಾಡುವುದು ಎಂಬ ಯೋಚನೆ ಬಂದಿರುವುದು ಸಂತೋಷ. ಎಂ.ಡಿ./ ಎಂ.ಎಸ್.ಗೆ ಸೇರಲು ಅರ್ಹತೆ ಇರುವುದು ಎಂ.ಬಿ.ಬಿ.ಎಸ್. ಮುಗಿಸಿದ ವಿದ್ಯಾರ್ಥಿಗಳಿಗೆ ಮಾತ್ರ. ಆದ್ದರಿಂದ ಇದನ್ನು ನೀವು ಮಾಡಲಾಗುವುದಿಲ್ಲ. RGUHS ಹೇಳಿಕೆಯ ಪ್ರಕಾರ ಪಿಎಚ್‌.ಡಿ. ಮಾಡಲು (3 ವರ್ಷ) ಸೇರಬಹುದು. ಅದರಿಂದ ಏನು ಪ್ರಯೋಜನ, ನಿಮ್ಮ ಗುರಿ ಏನು –ಎನ್ನುವುದನ್ನು ಯೋಚಿಸಿ. ಟೀಚಿಂಗ್‌ನಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ, ಆರಿಸಿಕೊಳ್ಳಬಹುದು.

ಡಿ. ಫಾರ್ಮಾ ನಂತರ ಜೆರೆಂಟಾಲಜಿಯಲ್ಲಿ (elder care) ವ್ಯಾಸಂಗ ಮಾಡಬಹುದು. ಉದಾಹರಣೆಗೆ ಯೂನಿವರ್ಸಿಟಿ ಆಫ್ ಸದರನ್ ಕ್ಯಾಲಿಪೋರ್ನಿಯಾದಲ್ಲಿ ಈ ಕೋರ್ಸ್‌ ಇದೆ.

ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಈ ಕೆಳಗಿನ ವೆಬ್‌ಸೈಟ್ ಯು.ಎಸ್. ಯೂನಿವರ್ಸಿಟಿಗಳ ಪಟ್ಟಿಯನ್ನೇ ನೀಡುತ್ತದೆ. TOEFL ಮತ್ತು GRE ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು.

www.wikipidea.org
www.pharmacytimes.com
www.pharmacal.org

ಸ್ಪೆಷಲೈಜೇಷನ್ ಅನ್ನು ಫಾರ್ಮಕಾಲಜಿ, ಫಾರ್ಮಕೋವಿಜಿಲೆನ್ಸ್, ಪೇಟೆಂಟಿಂಗ್ ಈ ರೀತಿಯ ಕೋರ್ಸ್ ಮಾಡಬಹುದು.

MBA in Pharma ಮಾಡಿದಲ್ಲಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶವಿದೆ. ಪೇಷೆಂಟ್‌ ಕೌನ್ಸಿಲಿಂಗ್, ಫಾರ್ಮಾ ಕ್ಷೇತ್ರದಲ್ಲಿ ಆಶಾದಾಯಕ ಕ್ಷೇತ್ರ.

ಈಗಾಗಲೇ ನಿಮ್ಮಲ್ಲಿ ಫಾರ್ಮಾ ಕ್ಷೇತ್ರದಲ್ಲಿ ಜ್ಞಾನವಿರುವುದರಿಂದ ಮುಂದಿನ ಹೆಜ್ಜೆಗಾಗಿ ತಯಾರಾಗಿ.

2. ನನ್ನ ಮಗಳು ಅಂತಿಮ ವರ್ಷದ ಬಯೋಟೆಕ್ನಾಲಜಿ ಎಂಜಿನಿಯರಿಂಗ್ ಓದುತ್ತಿದ್ದಾಳೆ. ಅವಳಿಗೆ ಮುಂದೆ ನೆಸ್ಲೆ, ಬ್ರಿಟಾನಿಯಾದಂತಹ ಆಹಾರ ಉತ್ಪದನಾ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆ. ಇದರ ಬಗ್ಗೆ ಸಲಹೆ ನೀಡಿ. ಅದಕ್ಕಾಗಿ ಅವಳು ಉನ್ನತ ಶಿಕ್ಷಣ ಮಾಡುವುದಾದರೆ ಯಾವ ವಿಷಯವನ್ನು ಆರಿಸಿಕೊಳ್ಳಬೇಕು?
–ನಾಗರಾಜ್ ಹೆಬ್ಬಂಡಿ, ಭದ್ರಾವತಿ

ಉತ್ತರ:
ಎಂಜಿನಿಯರಿಂಗ್ ಮುಗಿಸುತ್ತಿರುವ ಮಗಳ ಓದು ಮತ್ತು ಮುಂದೆ ವೃತ್ತಿಯ ಬಗ್ಗೆ ಕಳಕಳಿ ತೋರಿಸಿದ್ದೀರಿ, ಸಂತೋಷ. ಫುಡ್ ಇಂಡಸ್ಟ್ರಿಗೆ ಸೇರಬೇಕಾದರೆ ಫುಡ್ ಟೆಕ್ನಾಲಜಿ, ನ್ಯೂಟ್ರೀಷನ್, ಫುಡ್‌ ಸೈನ್ಸ್, ಫುಡ್ ಬಯೋಟೆಕ್ನಾಲಜಿ ಈ ರೀತಿಯ ವ್ಯಾಸಂಗ ಮಾಡಿರುವವರನ್ನು ಆಯ್ಕೆ ಮಾಡುತ್ತಾರೆ. ನಿಮ್ಮ ಮಗಳ ಬಿ.ಇ. (ಬಯೋಟೆಕ್ನಾಲಜಿ) ಮಾಡಿರುವುದರಿಂದ ಅವಳು ಎಂ.ಇ./ ಎಂ.ಟೆಕ್ ಇನ್ ಫುಡ್ ಬಯೋಟೆಕ್ನಾಲಜಿ ಕೋರ್ಸ್ ಮಾಡಬೇಕು. ಇದು ನಮ್ಮ ದೇಶದಲ್ಲೂ ಮತ್ತು ಹೊರದೇಶದಲ್ಲೂ ಮಾಡುವ ಅವಕಾಶವಿದೆ.

ಎಂ.ಟೆಕ್. 2 ವರ್ಷದ ಅವಧಿಯ ಕೋರ್ಸ್; ಅರ್ಹತೆ ಫುಡ್ ಸೈನ್ಸ್‌ನಲ್ಲಿ ಬಿ. ಇ. ಹಲವು ಇನ್ಸ್‌ಟಿಟ್ಯೂಟ್‌ಗಳಲ್ಲಿ GATE ಸ್ಕೋರನ್ನು ಕೇಳುತ್ತಾರೆ.

ಕೆಲವು ಕಾಲೇಜುಗಳು:
1. Jain University, Bangalore
2. Lovely Professional University, Delhi
3. Punjab University, Chandigarh
4. Jadavpur University, Kolkata
5. Alagappa College of Engineering, Chennai ಇನ್ನೂ ಅನೇಕ

ಯು.ಎಸ್. ಯೂನಿವರ್ಸಿಟಿ ಲಿಸ್ಟಿಂಗ್ ಈ ಕೆಳಕಂಡ ವೆಬ್‌ಸೈಟ್‌ನಲ್ಲಿ ಸಿಕ್ಕುತ್ತದೆ.
1. www. informationvine.com
2. www. masterstudies.com/biotechnology/USA

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT