ಪ್ರಜಾವಾಣಿ ಕ್ವಿಜ್

7
ಸ್ಪರ್ಧಾ ಜಗತ್ತು

ಪ್ರಜಾವಾಣಿ ಕ್ವಿಜ್

Published:
Updated:

1. ಹಾಸನದಲ್ಲಿರುವ ಸ್ನಾತಕೋತ್ತರ ಕೇಂದ್ರದ ಹೆಸರೇನು?
ಅ) ಮಾನಸ ಗಂಗೋತ್ರಿ 
ಆ) ಹೇಮ ಗಂಗೋತ್ರಿ 
ಇ) ದೇವ ಗಂಗೋತ್ರಿ 
ಈ) ಹಂಸ ಗಂಗೋತ್ರಿ

2. ಕರಗ ಮಹೋತ್ಸವದಲ್ಲಿ ಯಾವ ಜನಾಂಗದವರ ಪಾತ್ರ ಅತ್ಯಂತ ಮಹತ್ವದ್ದು?
ಅ) ಬೇಡರು    ಆ) ಕುಂಬಾರರು 
ಇ) ನಗರ್ತರು  ಈ) ವಹ್ನಿಕುಲದವರು

3. ‘ಎಪಿಕ್ ಥಿಯೇಟರ್’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ ನಾಟಕಕಾರ ಯಾರು?
ಅ) ಬ್ರೆಕ್ಟ್  ಆ) ಮೋಲಿಯೆರ್ 
ಇ) ಇಬ್ಸನ್  ಈ) ಬರ್ನಾಡ್ ಷಾ

4. ಭಾರತ ‘ರಫೆಲ್’ ಮಾದರಿಯ ಯುದ್ಧವಿಮಾನಗಳನ್ನು ಯಾವ ದೇಶದಿಂದ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ?
ಅ) ಅಮೆರಿಕ  ಆ) ಚೀನಾ

ಇ) ಫ್ರಾನ್ಸ್  ಈ) ಜರ್ಮನಿ

5. ಡೇಲ್ ಕಾರ್ನಗಿ ಯಾವ ಬಗೆಯ ಕೃತಿಗಳಿಂದಾಗಿ ಪ್ರಸಿದ್ಧರಾಗಿದ್ದಾರೆ?
ಅ) ಕಥೆ  ಆ) ಕಾದಂಬರಿ 
ಇ) ವ್ಯಕ್ತಿತ್ವ ವಿಕಸನ ಈ) ಐತಿಹಾಸಿಕ

6. ಇಮ್ರಾನ್‍ಖಾನ್ ಯಾವ ರಾಜಕೀಯ ಪಕ್ಷಕ್ಕೆ ಸೇರಿದವರು?
ಅ) ನ್ಯಾಷನಲ್ ಪಾರ್ಟಿ 
ಆ) ಪಾಕಿಸ್ತಾನ್ ಮುಸ್ಲಿಂ ಲೀಗ್ 
ಇ) ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 
ಈ)ಪಾಕಿಸ್ತಾನ್ ತಹ್ರಿಕ್ –ಎ-ಇನ್ಸಾಫ್

7. ಹಿಂದೂ ಪುರಾಣಗಳ ಪ್ರಕಾರ ತುಂಬುರು-ನಾರದರು ಯಾರನ್ನು ಮದುವೆಯಾಗಲು ಪೈಪೋಟಿ ನಡೆಸಿದರು?
ಅ) ದಮಯಂತಿ  ಆ) ಉಷಾ
ಇ) ಶ್ರೀಮತಿ     ಈ) ದೇವಕಿ

8. ಇವುಗಳಲ್ಲಿ ಯಾವುದನ್ನು ಹರ್ಮನ್ ಮೊಗ್ಲಿಂಗ್ ಸಂಪಾದಿಸಲಿಲ್ಲ?
ಅ) ಕಥಾಮಾಲೆ ಆ) ರಾಜೇಂದ್ರನಾಮೆ 
ಇ) ದಾಸರ ಪದಗಳು ಈ) ಜೈಮಿನಿ ಭಾರತ

9. ‘ಶ್ರೀಪತಿಯ ಕಥೆಗಳು’ ಕೃತಿಯ ಲೇಖಕರು ಯಾರು?
ಅ) ಆನಂದ ಆ) ಶ್ರೀಪತಿ 
ಇ) ಎ.ಆರ್. ಕೃಷ್ಣಶಾಸ್ತ್ರೀ ಈ) ಉಮಾಪತಿ

10. ಗುಳೇದಗುಡ್ಡವು ಯಾವ ಬಗೆಯ ಬಟ್ಟೆಗಾಗಿ ಪ್ರಸಿದ್ಧವಾಗಿದೆ?
ಅ)ಸೀರೆ ಆ) ರವಿಕೆ ಕಣ ಇ) ಪಂಚೆ ಈ) ಹೊದಿಕೆ

ಹಿಂದಿನ ಸಂಚಿಕೆಯ ಸರಿ ಉತ್ತರಗಳು1. ಕಳ್ಳಿ ನರಸಪ್ಪಯ್ಯ 2. ಗುಂಪುಸೇರುವಿಕೆ 3. ಬೈಕ್ ರೈಡಿಂಗ್ 4. ನರಸೀ ಮೆಹತಾ 5. ಕುಂದಾ 6. ಕಠ 7. ಪರಾವಲಂಬಿ 8. ವ್ಯಾಸ ಪೀಠ 9. ನಂಜನಗೂಡು ತಿರುಮಲಾಂಬ 10. ಈಲಿಯೆಡ್ 

ಬರಹ ಇಷ್ಟವಾಯಿತೆ?

 • 9

  Happy
 • 3

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !