ವಿದ್ಯಾರ್ಥಿವೇತನ ಕೈಪಿಡಿ

ಮಂಗಳವಾರ, ಏಪ್ರಿಲ್ 23, 2019
31 °C

ವಿದ್ಯಾರ್ಥಿವೇತನ ಕೈಪಿಡಿ

Published:
Updated:

ವರ್ಗ: ರಾಷ್ಟ್ರೀಯ ಮಟ್ಟ ‌

ವಿದ್ಯಾರ್ಥಿ ವೇತನ: ‘ಗ್ರೀನ್‌ ಗ್ರಾಸ್‌ರೂಟ್ಸ್‌’ಗೆ ಸಂಬಂಧಿಸಿದ 11ನೇ ರಾಷ್ಟ್ರೀಯ ದ್ವೈವಾರ್ಷಿಕ ಸ್ಪರ್ಧೆ– 2019 

ವಿವರ: ನ್ಯಾಷನಲ್‌ ಇನ್ನೊವೇಷನ್‌ ಫೌಂಡೇಷನ್‌ ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಕುರಿತು ಅರ್ಜಿ ಆಹ್ವಾನಿಸಿದೆ. ಶಕ್ತಿ ಸಂರಕ್ಷಣೆ, ಉತ್ಪಾದನೆ ಮತ್ತು ಇತರ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುವಂತಹ ತಾಂತ್ರಿಕ ಯೋಜನೆಯನ್ನು ಆಸಕ್ತ ಯುವ ಸಂಶೋಧಕರು ಸಲ್ಲಿಸಬೇಕು. ಸ್ಪರ್ಧೆಯಲ್ಲಿ ಆಯ್ಕೆಯಾದ ಯೋಜನೆಗೆ ನಗದು ಬಹುಮಾನ ದೊರೆಯುತ್ತದೆ. ಜತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಅವರಿಗೆ ವೇದಿಕೆ ಕಲ್ಪಿಸಲಾಗುತ್ತದೆ.

ಅರ್ಹತೆ: 12ನೇ ತರಗತಿವರೆಗಿನ ಯುವ ಸಂಶೋಧಕರ ತಂಡ ಅಥವಾ ವ್ಯಕ್ತಿಗಳು, ಕುಶಲಕರ್ಮಿಗಳು, ಕೊಳೆಗೇರಿ ನಿವಾಸಿಗಳು, ವಿದ್ಯಾರ್ಥಿಗಳು, ಮೆಕ್ಯಾನಿಕ್‌ಗಳು ಇತ್ಯಾದಿ ಅರ್ಜಿ ಸಲ್ಲಿಸಬಹುದು. ಪರಿಸರದ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಯೋಜನಾ ವರದಿಗಳನ್ನು ಅವರು ಸಲ್ಲಿಸಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ನ್ಯಾಷನಲ್‌ ರ್‍ಯಾಂಕಿಂಗ್‌ ಎಂಟ್ರಿಗಳ ಆಧರಿಸಿ ₹ 1 ಲಕ್ಷದಿಂದ ₹ 7.5 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಗಮನ ಸೆಳೆಯುವ ಯೋಜನೆಗೆ ಸಮಾಧಾನಕರ ಬಹುಮಾನವಾಗಿ ₹ 10 ಸಾವಿರ ನೀಡಲಾಗುವುದು.

ಕೊನೆಯ ದಿನ: 2019ರ ಮಾರ್ಚ್‌ 31

ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್‌ 

ಮಾಹಿತಿಗೆ: http://www.b4s.in/praja/NBC4

***

ವರ್ಗ: ಸಂಶೋಧನಾ ಹಂತ
ವಿದ್ಯಾರ್ಥಿ ವೇತನ: ಸ್ಮಾರ್ಟ್‌ ಫೆಲೋಶಿಪ್ಸ್‌, ಐಸಿಜಿಇಬಿ 2019

ವಿವರ: ಇಂಟರ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಜೆನಿಟಿಕ್‌ ಎಂಜಿನಿಯರಿಂಗ್‌ ಆ್ಯಂಡ್‌ ಬಯೋಟೆಕ್ನಾಲಜಿ (ಐಸಿಜಿಇಬಿ) ಯುವ ವಿಜ್ಞಾನಿಗಳ ಸಂಶೋಧನಾ ಯೋಜನೆಗಳಿಗೆ ಈ ಫೆಲೋಶಿಪ್‌ ನೀಡಲಿದೆ.

ಅರ್ಹತೆ: ಪಿಎಚ್‌.ಡಿ ಸಂಶೋಧನಾರ್ಥಿಗಳು ಅಥವಾ ಎಂ.ಎಸ್ಸಿ ಪದವೀಧರ ಭಾರತೀಯ ಯುವ ವಿಜ್ಞಾನಿಗಳು ಅರ್ಜಿ ಸಲ್ಲಿಸಬಹುದು
ಸೌಲಭ್ಯ ಮತ್ತು ಆರ್ಥಿಕ ನೆರವು: ಮೂರರಿಂದ 9 ತಿಂಗಳವರೆಗೆ ಮಾಸಿಕ 800ರಿಂದ 1,500 ಅಮೆರಿಕನ್‌ ಡಾಲರ್‌ ಸ್ಟೆಫಂಡ್‌ ಸಿಗಲಿದೆ. ಇದು ಸಂಶೋಧನಾ ಮೆರಿಟ್‌ ಮತ್ತು ಪ್ರಸ್ತಾವನೆಯನ್ನು ಅವಲಂಬಿಸಿರುತ್ತದೆ. ಅದಲ್ಲದೆ ಪ್ರಯೋಗಾಲಯದಲ್ಲಿನ ಸಂಶೋಧನಾ ಕಾರ್ಯಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 500 ಅಮೆರಿಕನ್‌ ಡಾಲರ್‌ಗಳ ನೆರವು ದೊರೆಯಲಿದೆ.

ಕೊನೆಯ ದಿನ: 2019ರ ಮಾರ್ಚ್‌ 31
ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಕೆ
ಮಾಹಿತಿಗೆ: http://www.b4s.in/praja/SFI2

***

ವರ್ಗ: ಸಂಶೋಧನಾ ಹಂತ

ವಿದ್ಯಾರ್ಥಿ ವೇತನ: ಆರ್ಟುರು ಫಲಾಸ್ಚಿ ಪಿಎಚ್‌.ಡಿ ಫೆಲೋಶಿಪ್‌, ಐಸಿಜಿಇಬಿ 2019

ವಿವರ: ಇಂಟರ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಜೆನಿಟಿಕ್‌ ಎಂಜಿನಿಯರಿಂಗ್‌ ಆ್ಯಂಡ್‌ ಬಯೋಟೆಕ್ನಾಲಜಿ (ಐಸಿಜಿಇಬಿ) ಸಂಶೋಧನೆ (ಪಿಎಚ್‌.ಡಿ) ಕೈಗೊಳ್ಳುವವರಿಗೆ ವಿದ್ಯಾರ್ಥಿ ವೇತನ ನೀಡಲಿದೆ.

ಅರ್ಹತೆ: ಬಿ.ಎಸ್ಸಿ (ಹಾನರ್ಸ್‌) ಅಥವಾ ಎಂ.ಎಸ್ಸಿ ಪದವೀಧರಾಗಿರಬೇಕು. ಇಂಗ್ಲಿಷ್‌ ಭಾಷೆ ಚೆನ್ನಾಗಿ ಬಲ್ಲವರಾಗಿರಬೇಕು. ಇದು ಅವರನ್ನು ಐಸಿಜಿಇಬಿ ಸೌಲಭ್ಯಗಳಿರುವ ಇಟಲಿ, ದೆಹಲಿ ಅಥವಾ ಕೇಪ್‌ಟೌನ್‌ನಲ್ಲಿ ಸಂಶೋಧನಾ ಚಟುವಟಿಕೆ ಕೈಗೊಳ್ಳಲು ನೆರವಾಗುತ್ತದೆ.

ಆರ್ಥಿಕ ಮತ್ತು ಸೌಲಭ್ಯ: ಆಯ್ಕೆಯಾಗುವ ಭಾರತೀಯ ಸಂಶೋಧನಾರ್ಥಿಗೆ ಮಾಸಿಕ ಸ್ಟೆಫಂಡ್‌ 1020 ಅಮೆರಿಕನ್‌ ಡಾಲರ್‌ ನೀಡಲಾಗುತ್ತದೆ. ಜತೆಗೆ ಐಸಿಜಿಇಬಿ ಪ್ರಯೋಗಾಲಯಗಳಿಗೆ ಹೋಗಿ ಬರುವ ಸಾರಿಗೆ ವೆಚ್ಚ, ವೈದ್ಯಕೀಯ ವಿಮೆ, ವಿಸಾ ಮತ್ತು ಅದರ ನವೀಕರಣ ಖರ್ಚು ವೆಚ್ಚಗಳು ಹಾಗೂ ಫೆಲೋಶಿಪ್‌ ಅವಧಿಯಲ್ಲಿ ವಸತಿ ಸೌಕರ್ಯವೂ ಇರುತ್ತದೆ.

ಕೊನೆಯ ದಿನ: 2019ರ ಮಾರ್ಚ್‌ 31
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ
ಮಾಹಿತಿಗೆ: http://www.b4s.in/praja/AFP2

ಕೃಪೆ: www.buddy4study.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !