ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 28 ಮೇ 2019, 19:30 IST
ಅಕ್ಷರ ಗಾತ್ರ

ವರ್ಗ: ಅಂತರರಾಷ್ಟ್ರೀಯ ಹಂತ

ವಿದ್ಯಾರ್ಥಿ ವೇತನ: ಟ್ರಾನ್ಸ್‌ಫಾರ್ಮ್‌ ಟುಗೆದರ್‌ ಸ್ಕಾಲರ್‌ಶಿಪ್ಸ್‌, ಷೆಫಿಲ್ಡ್ ಹೇಲಂವಿಶ್ವವಿದ್ಯಾಲಯ- 2019

ವಿವರ: ಬ್ರಿಟನ್‍ನ ಷೆಫಿಲ್ಡ್ ಹೇಲಂ ವಿಶ್ವವಿದ್ಯಾಲಯವು ತನ್ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವ ಭಾರತೀಯ ಅರ್ಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಿದೆ. ಅಂತರರಾಷ್ಟ್ರೀಯ ಮಟ್ಟದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಉನ್ನತ ಶಿಕ್ಷಣ ಕೈಗೊಳ್ಳುವಂತೆ ಪ್ರೋತ್ಸಾಹಿಸುವ ಉದ್ದೇಶವನ್ನು ಇದು ಹೊಂದಿದೆ.

ಅರ್ಹತೆ: ಷೆಫಿಲ್ಡ್ ವಿ.ವಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಇಂಗ್ಲಿಷ್ ಪ್ರೌಢಿಮೆ ಇರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದ ಶೇ 50ರಷ್ಟು ಮೊತ್ತವನ್ನು ಈ ವಿದ್ಯಾರ್ಥಿ ವೇತನವೇ ಭರಿಸುತ್ತದೆ.

ಕೊನೆಯ ದಿನ: 2019 ಮೇ 31

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/TTS7

***

ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಶೈಕ್ಷಣಿಕ ಶ್ರೇಷ್ಠತೆ ಸಲುವಾಗಿ ನೀಡುವ ಡಾ. ಬಿ.ಆರ್. ಮತ್ತು ಸಿ. ಆರ್. ಶೆಟ್ಟಿ ವಿದ್ಯಾರ್ಥಿ ವೇತನ

ವಿವರ: ಡಾ. ಬಿ.ಆರ್. ಮತ್ತು ಸಿ.ಆರ್. ಶೆಟ್ಟಿ ಪ್ರತಿಷ್ಠಾನ ಈ ವಿದ್ಯಾರ್ಥಿ ವೇತನದ ಮೂಲಕ ಹಣಕಾಸಿನ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ. ರೇಡಿಯೊ ಥೆರಪಿ, ನರ್ಸಿಂಗ್, ಡಯಾಲಿಸಿಸ್, ಅನಸ್ತೇಷಿಯಾ ಟೆಕ್ನಾಲಜಿ, ರೀನಲ್ ಡಯಾಲಿಸಿಸ್ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾಲಜಿ, ಫಿಸಿಯೋಥೆರಪಿ, ಎಎನ್‍ಎಕ್ಸ್, ಎಕ್ಸ್-ರೇ ತಂತ್ರಜ್ಞಾನ ವಿಷಯಗಳಲ್ಲಿ ಮೊದಲ ಮತ್ತು ಎರಡನೇ ವರ್ಷದ ಬಿ.ಎಸ್‌ಸಿ. ಮತ್ತು ಮೊದಲ ವರ್ಷದ ಡಿಪ್ಲೊಮಾ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆ: ಅರ್ಜಿದಾರರು ಉಡುಪಿ ನಿವಾಸಿಯಾಗಿರಬೇಕು. ಅಂಗವಿಕಲರು, ಸಿಂಗಲ್‌ ಪೇರೆಂಟ್‌ ಅರ್ಜಿದಾರರಿಗೆ ಆದ್ಯತೆ ನೀಡಲಾಗುತ್ತದೆ. ಅಂತೆಯೇಕ್ಯಾನ್ಸರ್‌, ಎಚ್‌ಐವಿ, ಎಂಡೋಸಲ್ಫಾನ್‌ ಪೀಡಿತರ ಕುಟುಂಬದವರ ಮಕ್ಕಳಿಗೆ ಹಾಗೂ ಬೀಡಿ ಕಾರ್ಮಿಕರ ಮಕ್ಕಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವವರಿಗೆ ₹ 60,000 ನೆರವು.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜೂನ್‌ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/DB1

***

ವರ್ಗ: ಸಂಶೋಧನಾ ಹಂತ

ವಿದ್ಯಾರ್ಥಿ ವೇತನ: ಜವಾಹರಲಾಲ್‌ ನೆಹರೂ ಸ್ಮಾರಕ ನಿಧಿ ವಿದ್ಯಾರ್ಥಿವೇತನ– 2019

ವಿವರ:ಜವಾಹರಲಾಲ್‌ ನೆಹರೂ ಸ್ಮಾರಕ ನಿಧಿ ಮತ್ತು ಮಾನವ ಸಂಪನ್ಮೂಲ ಸಚಿವಾಲಯ ಪಿಎಚ್‌.ಡಿ. ಸಂಶೋಧನಾರ್ಥಿಗಳಿಗೆ ಈ ವಿದ್ಯಾರ್ಥಿವೇತನನೀಡುತ್ತವೆ. ಆಯ್ಕೆಯಾಗುವ ಸಂಶೋಧಕರಿಗೆ ಮಾಸಿಕ ಶಿಷ್ಯವೇತನ ದೊರೆಯುತ್ತದೆ.

ಅರ್ಹತೆ: ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಪಿಎಚ್‌.ಡಿ. (ಪೂರ್ಣಾವಧಿ ) ಸಂಶೋಧನಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ ವಯೋಮಿತಿ 35 ವರ್ಷ ಮೀರಬಾರದು. ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ಸಂಶೋಧನಾರ್ಥಿಗಳಿಗೆ ತಿಂಗಳಿಗೆ ₹ 18 ಸಾವಿರದ ಜತೆಗೆ ವಾರ್ಷಿಕ ₹ 15,000 ಆರ್ಥಿಕ ನೆರವು ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಮೇ 31

ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್‌ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.

ಮಾಹಿತಿಗೆ: http://www.b4s.in/praja/JNM12

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT