ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿವೇತನ ಕೈಪಿಡಿ

Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ವರ್ಗ: ಮೆರಿಟ್ ಆಧಾರಿತ

ವಿದ್ಯಾರ್ಥಿ ವೇತನ: ಬಿ.ಎಂ.ಎಲ್. ಮಂಜಲ್ ವಿಶ್ವವಿದ್ಯಾಲಯ ವಿದ್ಯಾರ್ಥಿ ವೇತನ- 2019

ವಿವರ: ಕಾನೂನು ಮತ್ತು ತಾಂತ್ರಿಕ ವಿಷಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಬಿ.ಎಂ.ಎಲ್ ಮಂಜಲ್ ವಿಶ್ವವಿದ್ಯಾಲಯ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನವು ಶೇ 100ರಷ್ಟು ಬೋಧನಾ ಶುಲ್ಕವನ್ನು ಭರಿಸುತ್ತದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವ, ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೈಗೊಳ್ಳಲು ಪ್ರೋತ್ಸಾಹಿಸುವ ಉದ್ದೇಶವನ್ನು ಈ ವಿದ್ಯಾರ್ಥಿವೇತನ ಹೊಂದಿದೆ.

ಅರ್ಹತೆ: ಐಐಟಿ- ಜೆಇ (ಮುಖ್ಯ ಮತ್ತು ಅಡ್ವಾನ್ಸ್‌ಡ್‌) ಪರೀಕ್ಷೆ ಪಾಸಾಗಿರುವ ಅಥವಾ ಸಿ.ಎಲ್‍.ಎ.ಟಿ ಅಥವಾ ಎಲ್‍.ಎಸ್‍.ಎ.ಟಿ ಪರೀಕ್ಷೆ ಪಾಸಾಗಿರುವ ವಿದ್ಯಾರ್ಥಿಗಳು ಕ್ರಮವಾಗಿ 2019ರ ಬಿ.ಟೆಕ್. ಅಥವಾ ಕಾನೂನು ಕೋರ್ಸ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ
ಶೇ 100ರಷ್ಟು ಬೋಧನಾ ಶುಲ್ಕ, ವಸತಿ ಮತ್ತಿತರ ಖರ್ಚು ವೆಚ್ಚಗಳನ್ನು ಈ ವಿದ್ಯಾರ್ಥಿ ವೇತನ ಭರಿಸಲಿದೆ.

ಕೊನೆಯ ದಿನಾಂಕ: 2019ರ ಜುಲೈ 22

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ:http://www.b4s.in/praja/BML1

***

ವರ್ಗ: ಪ್ರತಿಭೆ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಯು.ಜಿ.ಎ.ಎಂ.- ಲೆಗ್ರ್ಯಾಂಡ್ ವಿದ್ಯಾರ್ಥಿ ವೇತನ 2019-20

ವಿವರ: ವಿಜ್ಞಾನ ವಿಷಯದಲ್ಲಿ 12ನೇ ತರಗತಿ ಪಾಸಾಗಿರುವ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಬಿ.ಟೆಕ್./ ಬಿ.ಆರ್ಕ್. ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

ಅರ್ಹತೆ: ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು 10 ಮತ್ತು 12ನೇ ತರಗತಿಗಳಲ್ಲಿ ತಲಾ ಶೇ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಿರಬೇಕು. ಅರ್ಜಿದಾರರು ದೇಶದ ಎಲ್ಲಿಯಾದರೂ ಬಿ.ಟೆಕ್., ಬಿ.ಇ. ಅಥವಾ ಬಿ.ಆರ್ಕ್. ಕೋರ್ಸ್‌ನ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬೇಕು.

ಆರ್ಥಿಕ ನೆರವು: ಅರ್ಹ ಅರ್ಜಿದಾರರಿಗೆ ವಾರ್ಷಿಕ ₹ 60,000 ಅಥವಾ ಕೋರ್ಸ್‌ನ ಶುಲ್ಕ (ಎರಡರಲ್ಲಿ ಯಾವುದು ಕಡಿಮೆಯೋ ಅದು) ವಿದ್ಯಾರ್ಥಿ ವೇತನದಿಂದ ಭರಿಸಲಾಗುತ್ತದೆ.

ಕೊನೆ ದಿನಾಂಕ: 2019ರ ಜುಲೈ 25

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/LFL2

***

ವರ್ಗ: ಆರ್ಥಿಕ ಅಗತ್ಯ ಆಧಾರಿತ

ವಿದ್ಯಾರ್ಥಿ ವೇತನ: ಐಡಿಎಫ್‍ಸಿ ಫಸ್ಟ್‌ ಬ್ಯಾಂಕ್ ಎಂ.ಬಿ.ಎ. ವಿದ್ಯಾರ್ಥಿ ವೇತನ 2019-21

ವಿವರ: ದೇಶದ ಆಯ್ದ 150 ಕಾಲೇಜುಗಳಲ್ಲಿ ಮೊದಲ ವರ್ಷದ ಎಂಬಿಎ ಕೋರ್ಸ್‌ಗೆ (ಪೂರ್ಣಾವಧಿ) ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಐಡಿಎಫ್‍ಸಿ ಫಸ್ಟ್‌ ಬ್ಯಾಂಕ್‍ ವಿದ್ಯಾರ್ಥಿ ವೇತನ ನೀಡಲಿದೆ. ಬೋಧನಾ ಶುಲ್ಕ ಪಾವತಿಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ.

ಅರ್ಹತೆ: ದೇಶದ ಆಯ್ದ 150 ಶಿಕ್ಷಣ ಸಂಸ್ಥೆಗಳಲ್ಲಿ 1ನೇ ವರ್ಷದ ಎಂಬಿಎ ಕೋರ್ಸ್ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹ 6 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಾರ್ಷಿಕ ₹ 1 ಲಕ್ಷದಂತೆ ಎರಡು ವರ್ಷ ವಿದ್ಯಾರ್ಥಿವೇತನ ದೊರೆಯಲಿದೆ.

ಕೊನೆಯ ದಿನಾಂಕ: 2019ರ ಜುಲೈ 31

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ

ಮಾಹಿತಿಗೆ: http://www.b4s.in/praja/IFBMS1

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT