ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ

Last Updated 27 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ
ವಿದ್ಯಾರ್ಥಿ ವೇತನ: ಸೀಮೆನ್ಸ್ ವಿದ್ಯಾರ್ಥಿವೇತನ ಕಾರ್ಯಕ್ರಮ 2019-20
ವಿವರ: ಎಂಜಿನಿಯರಿಂಗ್ ಕೋರ್ಸ್‌ನ ಯಾವುದೇ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗುವ ಉದ್ದೇಶದಿಂದ ‘ಸೀಮೆನ್ಸ್ ಇಂಡಿಯಾ’ ಈ ವಿದ್ಯಾರ್ಥಿ ವೇತನದ ಮೂಲಕ ಆರ್ಥಿಕ ನೆರವು ನೀಡಲಿದೆ. ಈ ನೆರವು ಪಡೆದ ವಿದ್ಯಾರ್ಥಿಗಳು ಯಶಸ್ವಿಯಾಗಿ ವ್ಯಾಸಂಗ ಪೂರೈಸಿದ ಬಳಿಕ ಅವರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಒಳಗೊಂಡಿದೆ.
ಅರ್ಹತೆ: ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಮೊದಲನೇ ವರ್ಷಕ್ಕೆ ದಾಖಲಾದ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 10ನೇ ತರಗತಿಯಲ್ಲಿ ಕನಿಷ್ಠ ಶೇ 60 ಮತ್ತು 12ನೇ ತರಗತಿಯಲ್ಲಿ ಶೇ 50ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರಬೇಕು. ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
ಆರ್ಥಿಕ ನೆರವು ಮತ್ತು ಬಹುಮಾನ: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗದ ಅವಧಿಯ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ, ಪುಸ್ತಕ ಮತ್ತು ಲೇಖನ ಸಾಮಗ್ರಿಯ ಖರ್ಚು ವೆಚ್ಚಗಳು ಈ ವಿದ್ಯಾರ್ಥಿ ವೇತನದ ಮೂಲಕ ಮರು ಪಾವತಿಯಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಆಗಸ್ಟ್ 31
ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ
ಮಾಹಿತಿಗೆ: http://www.b4s.in/praja/SSP1

***

ವರ್ಗ: ಅಂತರರಾಷ್ಟ್ರೀಯ ಮಟ್ಟ
ವಿದ್ಯಾರ್ಥಿ ವೇತನ: ಚಾನ್ಸೆಲರ್ ಫೆಲೋಶಿಪ್- ಜರ್ಮನಿ 2019
ವಿವರ: ಜರ್ಮನಿಯ ಅಲೆಕ್ಸಾಂಡರ್ ವಾನ್ ಹೆಂಬೋಲ್ಟ್ ಪ್ರತಿಷ್ಠಾನ ಈ ವಿದ್ಯಾರ್ಥಿ ವೇತನ ಆರಂಭಿಸಿದೆ. ವ್ಯವಸ್ಥಾಪಕರನ್ನಾಗಿ ತರಬೇತಿಗೊಳಿಸಿ, ಅವರಿಗೆ ಜಾಗತಿಕ ಅವಕಾಶಗಳನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ. ಅಲ್ಲದೆ ಜರ್ಮನಿಯ ಸ್ವ- ಅಭಿವೃದ್ಧಿ ಯೋಜನೆಯಡಿ ಕೆಲಸ ಮಾಡಿ, ವೃತ್ತಿ ಜೀವನ ಆರಂಭಿಸಲು ಇದು ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ.
ಅರ್ಹತೆ: ಜರ್ಮನ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನುರಿತ ಭಾರತೀಯ ಪದವೀಧರರು ಈ ಒಂದು ವರ್ಷದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಆರ್ಥಿಕ ನೆರವು ಮತ್ತು ಬಹುಮಾನ: ಆಯ್ದ ಫೆಲೊಗಳಿಗೆ ತಿಂಗಳಿಗೆ 2,150 ಯುರೊದಿಂದ 2750 ಯುರೊವರೆಗೆ ನೆರವು ದೊರೆಯುತ್ತದೆ. ಅಲ್ಲದೆ ತಿಂಗಳಿಗೆ ಸಂಶೋಧನೆಗಾಗಿ 2,750 ಯುರೊ ಸಿಗುತ್ತದೆ. ಜತೆಗೆ ಪ್ರಯಾಣ ಭತ್ಯೆ, ಆರೋಗ್ಯ ವಿಮೆ ಸೇರಿದಂತೆ ಇತರ ಭತ್ಯೆಗಳು ದೊರೆಯುತ್ತವೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಸೆಪ್ಟೆಂಬರ್ 15
ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮೂಲಕ
ಮಾಹಿತಿಗೆ: http://www.b4s.in/praja/CSM1

ಕೃಪೆ:www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT