ಸೋಮವಾರ, ಜೂಲೈ 6, 2020
23 °C

ವಿಐಟಿ: ಪ್ರವೇಶ ಪರೀಕ್ಷೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿನ ಕಾರಣಕ್ಕೆ ಈ ಬಾರಿ ವಿಲ್ಲೋರ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ (ವಿಐಟಿ) ಎಂ.ಟೆಕ್‌ ಮತ್ತು ಎಂಸಿಎ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ನಡೆಸದೆ, ಪದವಿಯಲ್ಲಿ ಸಾಧನೆ ಆಧಾರದಲ್ಲೇ ಪ್ರವೇಶ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳು ವಿಐಟಿಯ ವೆಬ್‌ಸೈಟ್‌ www.vit.ac.in ಇಲ್ಲಿಗೆ ತೆರಳಿ ಜೂನ್‌ 20ರೊಳಗೆ ಅರ್ಜಿ ಸಲ್ಲಿಸಬಹುದು. ‘ಗೇಟ್‌’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗುವುದು.

12ನೇ ತರಗತಿ ಪೂರೈಸಿದ ವಿದ್ಯಾರ್ಥಿಗಳು ವಿಐಟಿಯ 5 ವರ್ಷಗಳ ಸಮಗ್ರ ತಾಂತ್ರಿಕ ಶಿಕ್ಷಣಕ್ಕೂ  (ಎಂ.ಟೆಕ್‌, ಎಂಎಸ್‌ಸಿ) ನೇರವಾಗಿ ಸೇರಿಕೊಳ್ಳಬಹುದು. ಪಿಯು ಪರೀಕ್ಷೆ ಇನ್ನೂ ಕೊನೆಗೊಂಡಿಲ್ಲವಾದ ಕಾರಣ ಇದಕ್ಕೆ ಅರ್ಜಿ ಸಲ್ಲಿಸಲು ಜುಲೈ 15ರವರೆಗೆ ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.