‘ಗ್ರಾಫಾಲಜಿ ಎಂದರೇನು?’

7

‘ಗ್ರಾಫಾಲಜಿ ಎಂದರೇನು?’

Published:
Updated:

ನನಗೆ ಗ್ರಾಫಾಲಜಿ ಕೋರ್ಸ್ ಬಗ್ಗೆ ಮಾಹಿತಿ ಬೇಕು. ಇದರಿಂದ ಪ್ರಯೋಜನ ಏನು? ಎಲ್ಲಿ ಓದಬಹುದು? ದಯವಿಟ್ಟು ತಿಳಿಸಿ. ಈಗ ನಾನು ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದೇನೆ.

ಖ್ಯಾತಿ, ಮಂಡ್ಯ

ಗ್ರಾಫಾಲಜಿ ಅಂದರೆ ಬರವಣಿಗೆಯ ಪರಿಶೀಲನೆ ಮಾಡುವುದು. ನಾವು ಗಮನಿಸುತ್ತಾ ಬಂದರೆ ನಮ್ಮ ಮೂಡ್ ಚೆನ್ನಾಗಿದ್ದಾಗ, ಗುಂಡಗೆ ಚೆನ್ನಾಗಿ ಬರೆಯುತ್ತೇವೆ. ಮನಸ್ಸಿಗೆ ಬೇಜಾರು, ಆಘಾತ ಆದಾಗ ನಮ್ಮ ಬರವಣಿಗೆಯೂ ವ್ಯತ್ಯಾಸವಾಗುತ್ತದೆ. ಈ ಬರವಣಿಗೆಯ ಪರಿಶೀಲನೆಯನ್ನು ಮಾಡುವ ರೀತಿಯನ್ನು ಗ್ರಾಫಾಲಜಿ ಕೋರ್ಸ್ ತಿಳಿಸುತ್ತದೆ.

ಬರವಣಿಗೆ, ವ್ಯಕ್ತಿಯ ವ್ಯಕ್ತಿತ್ವ(Personality)ವನ್ನು ಸೂಚಿಸುತ್ತದೆ. ನಮಗೇ ಅರಿಯದ ಹಲವಾರು ನಮ್ಮ ವ್ಯಕ್ತಿತ್ವದ ನ್ಯೂನತೆ ಅಥವಾ ಉತ್ತಮವಾದ ಗುಣವನ್ನು ಕಂಡು ಹಿಡಿಯಬಹುದು. ಬರೆಯುವ ರೀತಿ, ಮಾರ್ಜಿನ್ ಬಿಡುವ ರೀತಿ, ಸಾಲುಗಳ ನಡುವೆ ಇರುವ ಅಂತರ ಇವೆಲ್ಲಾ ನಮ್ಮ ಆಕಾಂಕ್ಷೆಗಳು, ಮಾನಸಿಕ ಸಮತೋಲನ (Balance), ಈಗೋ (Ego), ಸೆಲ್ಫ್ ಎಸ್ಟೀಮ್, ಅನಲಿಟಿಕಲ್ ಥಿಂಕಿಂಗ್ ಎಲ್ಲವನ್ನು ಸೂಚಿಸುತ್ತದೆ.

ಗ್ರಾಫಾಲಜಿಯ ಉಪಯೋಗಗಳನ್ನು ಹಲವಾರು ಕ್ಷೇತ್ರಗಳಲ್ಲಿ ಪ್ರಯೋಗಿಸಬಹುದು.

ಬಿಸಿನೆಸ್ ಕಂಪ್ಯಾಟಿಬಿಲಿಟಿ, ಮೆಡಿಕಲ್ ಡಯೋಗ್ನೋಸಿಸ್,  ಜೂರಿ ಸ್ಕ್ರೀನಿಂಗ್‌ (Jury Screening), ಗ್ರಾಫೋಥೆರಪಿ (Grophotherapy), ಫಾರೆನ್ಸಿಕ್ ಡಾಕ್ಯುಮೆಂಟ್ (Forensic Document) ಪರಿಶೀಲನೆ, ಇನ್ನೂ ಅನೇಕ...

ದೊಡ್ಡ ದೊಡ್ಡ ಕಂಪನಿಗಳಿಗೆ ಕೆಲಸಕ್ಕೆ ತೆಗೆದುಕೊಳ್ಳುವಾಗ ಗ್ರಾಫಾಲಜಿಯ ಜ್ಞಾನ ಬಹಳ ಸಹಾಯಕ್ಕೆ ಬರುತ್ತದೆ. ವ್ಯಕ್ತಿತ್ವದ ಪರಿಚಯವನ್ನು ನಮ್ಮ ಬರವಣಿಗೆ ಕೊಡುವುದರಿಂದ ಉತ್ತಮವಾದ ‘ಟೀಂ’ ಅನ್ನು ಕಟ್ಟಿ, ಪ್ರಗತಿಯತ್ತ ಸಾಗಬಹುದು.

ಗ್ರಾಫಾಲಜಿ ತರಬೇತಿಯನ್ನು ಭಾರತದಲ್ಲಿ ಹಲವಾರು ಇನ್ಸ್‌ಟಿಟ್ಯೂಟ್‌ಗಳಲ್ಲಿ ನೀಡುತ್ತಾರೆ. 

ಬಿ.ಎ./ ಎಂ.ಎ. ಗ್ರಾಫಾಲಜಿಯನ್ನು:

1.→The University of Urbino, Italy 

→(M.A. Graphology)

2.→The LUMSA University in Rome, Italy 

→(B.A. Graphonolgy)

3.→Emerson University College, Argentina 

→(B.A. course)

4. Autonomus Univesity of Barcelona, Spain

 (M.A.)

ಕೋರ್ಸ್‌ಗಳನ್ನು ಮಾಡಲು ಅವಕಾಶವಿದೆ. 

ನೀವು ಎಚ್‌ಆರ್ ಆಗಿ ಕೆಲಸ ಮಾಡುತ್ತಿರುವುದರಿಂದ ಇತರ ತರಬೇತಿ ನಿಮಗೆ ಸಹಾಯಕವಾಗುತ್ತದೆ.

 ನಾನು ಬಿ.ಎಂ.ಎಲ್.ಟಿ. ಕೋರ್ಸ್ ಮಾಡಿ, ಶೇ 60 ಅಂಕ ಪಡೆದಿದ್ದೇನೆ. 2 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈಗ ನನಗೆ ಸ್ನಾತಕೋತ್ತರ ಪದವಿ ಪಡೆಯುವ ಇಚ್ಛೆ ಇದೆ. ನನಗೆ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಬೇಕು. ದಯವಿಟ್ಟು ತಿಳಿಸಿ.

ಧೃತಿ, ಧಾರವಾಡ

ನೀವು ಬ್ಯಾಚುಲರ್ ಆಫ್ ಮೆಡಿಕಲ್ ಲ್ಯಾಬೊರೆಟರಿ ಟೆಕ್ನಾಲಜಿ (Bachelor of Medical laboratory Technology - BMLT)  ಡಿಗ್ರಿ ಮಾಡಿರುವುದು ಸಂತೋಷ. ಇದೇ ಕೋರ್ಸ್‌ನಲ್ಲಿ ಡಿಪ್ಲೊಮ ಮಾಡಿದ್ದರೆ, ಸ್ನಾತಕೋತ್ತರ ಕೋರ್ಸ್‌ಗೆ ತೊಂದರೆ ಆಗುತ್ತಿತ್ತು.

ಮನೆ ಊಟದ ಮೇಲೆ ಆಸೆ ಕಡಿಮೆ ಆಗಿ ಹೊರಗಿನ ಆಹಾರ ಸೇವಿಸುವವರೇ ಇಂದು ಜಾಸ್ತಿ ಆಗಿದ್ದಾರೆ. ಮನೆಗಳಲ್ಲಿ ಅಡುಗೆ ಮಾಡುವವರು, ಮಾಡುವ ಆಸೆ ಇಲ್ಲದವರು ಹೆಚ್ಚು ಆಗಿರುವ ಕಾರಣ, ‘ಆರೋಗ್ಯ’ದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಇದರಿಂದ ಹೆಚ್ಚುತ್ತಿರುವ ಬೊಜ್ಜು, ಮಧುಮೇಹ, ರಕ್ತದ ಒತ್ತಡದ ಕಾಯಿಲೆ, ಹೃದ್ರೋಗ – ಹೀಗೆ ಅನೇಕ ಕಾಯಿಲೆಗಳು ಚಿಕ್ಕ ವಯಸ್ಸಿನವರಲ್ಲಿ ಕಂಡು ಬರುತ್ತಿದೆ. ಇವರ ಚಿಕಿತ್ಸೆಯನ್ನು ಆಸ್ಪತ್ರೆಗಳಲ್ಲಿ ಸರಿಯಾದ ರೀತಿ ಮಾಡಬೇಕಾದರೆ, ಒಳ್ಳೆಯ ಹಾಸ್ಪಿಟಲ್ ಮ್ಯಾನೇಜರ್ಸ್‌ನ ಅಗತ್ಯವಿದೆ. ನೀವು ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ಮಾಡಬಹುದು (Hospital Management).

ಎಲಿಜಿಲಿಬಿಟಿ ಒಂದೊಂದು ಇನ್ಸ್‌ಟಿಟ್ಯೂಟ್‌ ಡಿಗ್ರಿ (ಯಾವುದಾದರೂ) ಹೆಲ್ತ್ ರಿಲೇಟೆಡ್ ಡಿಗ್ರಿ, ಎಂ.ಬಿ.ಬಿ.ಎಸ್., ಬಿ.ಡಿ.ಎಸ್., ನಾನ್ ಮೆಡಿಕಲ್ ಡಿಗ್ರಿ – ಹೀಗೆ ಬೇರೆ ಬೇರೆ ಕೇಳುತ್ತಾರೆ. ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಡಿಗ್ರಿಯನ್ನು BHM/ BHA ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮ ಇನ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಎಂ.ಬಿ.ಎ.  ಇನ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಎಂ.ಫಿಲ್. ಈ ರೀತಿ ಪಡೆಯಬಹುದು.

ಸೀಮಿತ ಅವಧಿಯ ಡಿಪ್ಲೊಮ, ಸರ್ಟಿಫಿಕೇಟ್‌, ಕರೆಸ್ಪಾಂಡೆನ್ಸ್ ಕೋರ್ಸ್‌ ಸಹ ಲಭ್ಯವಿದೆ. 

ಕೆಲವು ಇನ್ಸ್‌ಸ್ಟಿಟ್ಯೂಟ್ ಮತ್ತು ವಿಶ್ವವಿದ್ಯಾಲಯಗಳು ಈ ಕೋರ್ಸ್ ನೀಡುವ ಪಟ್ಟಿ:

1. Apollo Institute of Hospital Administration, Hyderabad

www.apolloiha.ac.in

2. Department of Management Studies, Madurai Kamaraj University, Madurai

www.mkudde.org

3. Manipal Academy of Higher Education, Manipal

www.manipal.edu

4. National Institute of Health and Family Welfare, New Delhi

www.nihfw.org

5. Institute of Management Studies, Devi Ahilya Vishwa Vidyalaya, Indore 

www.ims.dauniv.ac.in

ಮತ್ತು ಇನ್ನೂ ಅನೇಕ....

ಹಲವಾರು ಹೊಸ ಮತ್ತು ಹಳೆಯ ಆಸ್ಪತ್ರೆಯನ್ನು ನವೀನ ರೀತಿಯಲ್ಲಿ ನಡೆಸಲು MHM ಕೋರ್ಸ್‌ನ್ನು ಮಾಡಿರುವವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಉದ್ಯೋಗದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ.

 ನಾನು 2ನೇ ವರ್ಷದ ಬಿ.ಎ.ಎಂ.ಎಸ್. ಕೋರ್ಸ್ ಮಾಡುತ್ತಿದ್ದೇನೆ. ಸ್ನಾತಕೋತ್ತರ ಪದವಿಯನ್ನು ಎಲ್ಲಿ ಮಾಡಬಹುದು? ಹೊರ ದೇಶದಲ್ಲಿಯೂ ಈ ಅವಕಾಶವಿದೆಯೆ? 

ಗಾರ್ಗಿ, ತುಮಕೂರು

ಬ್ಯಾಚುಲರ್ ಇನ್ ಆಯುರ್ವೇದದ 2ನೇ ವರ್ಷದಿಂದಲೇ ಸ್ನಾತಕೋತ್ತರ ಪದವಿಯ ಚಿಂತನೆ ನಡೆಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ಮುಂದಿನ ಕೋರ್ಸ್ ಬಗ್ಗೆ ಚಿಂತನೆ ಮಾಡಲೇಬೇಕು. ಟೆಲಿ ಮೆಡಿಸಲ್ ಕಾಲದಲ್ಲಿ ವೆಬ್ ಮೂಲಕ ಆಯುರ್ವೇದ, ಯುನಾನಿ ಮತ್ತು ಆಲೋಪತಿ ತಜ್ಞರು ಒಟ್ಟಿಗೆ ಒಂದು ಕಾಯಿಲೆಯ ಪರಿಹಾರ ನೀಡುತ್ತಿದ್ದಾರೆ.

ಯುಜಿ/ ಪಿಜಿ/ ಪಿಎಚ್.ಡಿ. ಪದವಿಗಳನ್ನು ಈ ಕೆಳಕಂಡ ಹಲವು ವಿಶ್ವವಿದ್ಯಾಲಯದಿಂದ ಪಡೆಯಬಹುದು.

1.→Gujarat Ayurved University, Gujarat

→(www.panchakarma.com)

2. Banaras Hindu University, Faculty of Ayurveda Institute of Medical Science Varanasi (www.bhu.ac.in)

3. National Institute of Ayurveda, Jaipur

→(www.nia.nic.in)

4. Govt Ayurved College, Nagpur

→(www.gacnagpur.org)

5. Govt. Ayurveda College, Thiruvananthapuram

→(www.govtayurvedacollegetvm.nic.in)

ಇನ್ನೂ ಅನೇಕ.... ಅಮೆರಿಕಾದಲ್ಲಿ...

1. Dhanvantari Ayurveda Centre Florida

(www.ayurvedist.com)

2. Ayurveda Healing Art Institute, Berkeley, California (www.ayurveda - california.com)

3. National Institute of Ayurvedic Medicine Newyork (www.panchakarma.com)

4. The California College of Ayurveda California (www.ayurvedacollege.com)

... ಇನ್ನೂ ಅನೇಕ

ಆಯುರ್ವೇದದ ತಳಹದಿ ನಮ್ಮ ದೇಶದಲ್ಲಿ ಇರುವುದರಿಂದ ಸ್ನಾತಕೋತ್ತರ ತರಬೇತಿ ಭಾರತದಲ್ಲೇ ಉತ್ತಮ.

v

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !