ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮಹಾತ್ಮೆ: ಫರೀದ್‌ಕೋಟ್‌ (ಪಂಜಾಬ್‌)

Published 3 ಏಪ್ರಿಲ್ 2024, 19:54 IST
Last Updated 3 ಏಪ್ರಿಲ್ 2024, 19:54 IST
ಅಕ್ಷರ ಗಾತ್ರ

ಪಂಜಾಬ್‌ನ ಪ್ರತಿಷ್ಠಿತ ಫರೀದ್‌ಕೋಟ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸೂಫಿ ಗಾಯಕ ಮತ್ತು ಪಂಜಾಬಿ ನಟನ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಆಡಳಿತಾರೂಢ ಎಎಪಿಯು ಪಂಜಾಬಿ ನಟ ಕರಮ್‌ಜೀತ್‌ ಅನ್ಮೋಲ್‌ ಅವರನ್ನು ಅಖಾಡಕ್ಕಿಳಿಸಿದರೆ, ಬಿಜೆಪಿಯು ಸೂಫಿ ಗಾಯಕ ಹಾಗೂ ವಾಯವ್ಯ ದೆಹಲಿಯ ಸಂಸದ ಹನ್ಸ್‌ ರಾಜ್‌ ಹನ್ಸ್ ಅವರನ್ನು ಸ್ಪರ್ಧೆಗಿಳಿಸಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೊಹಮ್ಮದ್‌ ಸಾದಿಕ್‌ ಅವರು 4,19,065 ಮತಗಳನ್ನು ಪಡೆದು ಗೆದ್ದಿದ್ದರು. 2009ರಲ್ಲಿ ಶಿರೋಮಣಿ ಅಕಾಲಿದಳಕ್ಕೆ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಹನ್ಸ್‌ ರಾಜ್‌ ಅವರು, ಆ ವರ್ಷ ಜಲಂಧರ್‌ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು. 2014ರಲ್ಲಿ ಕಾಂಗ್ರೆಸ್‌ಗೆ ಸೇರಿದ ಇವರು ಬಳಿಕ ಆ ಪಕ್ಷವನ್ನೂ ತೊರೆದಿದ್ದರು. ಹನ್ಸ್‌ ರಾಜ್‌ ಅವರು 2016ರಲ್ಲಿ ಬಿಜೆಪಿಗೆ ಸೇರಿದ್ದರು. ಗಾಯಕರೂ ಆಗಿರುವ ಕರಮ್‌ಜೀತ್‌ ಅವರು ಹಲವು ಪಂಜಾಬಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಜನಿತರಾಗಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರ ಆಪ್ತರಾಗಿರುವ ಇವರು, 2022ರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪರ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹನ್ಸ್‌ ರಾಜ್‌ ಅವರು ಕಳೆದ ಚುನಾವಣೆಯಲ್ಲಿ ವಾಯವ್ಯ ದೆಹಲಿ ಕ್ಷೇತ್ರದಲ್ಲಿ 8,48,630 ಮತಗಳನ್ನು ಪಡೆದು ಎಎಪಿಯ ಗುಗನ್‌ ಸಿಂಗ್‌ ರಂಗಾ ಅವರನ್ನು ಸೋಲಿಸಿದ್ದರು. 15 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಹನ್ಸ್‌ ರಾಜ್‌ ಅವರು ಕರಮ್‌ಜೀತ್‌ ಅವರನ್ನು ಮಣಿಸುತ್ತಾರೊ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT