ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results: ಕಂಗನಾ ರನೌತ್‌, ಪಠಾಣ್‌ಗೆ ಗೆಲುವು; ಪವನ್‌ ಸಿಂಗ್‌ ಪರಾಭವ

Published 4 ಜೂನ್ 2024, 23:12 IST
Last Updated 4 ಜೂನ್ 2024, 23:12 IST
ಅಕ್ಷರ ಗಾತ್ರ

ಕ್ರೀಡೆ, ಸಿನಿಮಾ ಒಳಗೊಂಡಂತೆ ಬೇರೆ ಕ್ಷೇತ್ರಗಳಲ್ಲಿದ್ದ ಹಲವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರಲ್ಲಿ ಕೆಲವರು ಗೆದ್ದರೆ, ಕೆಲವರು ಸೋತಿದ್ದಾರೆ.

ಅರುಣ್‌ ಗೋವಿಲ್‌ 

1997 ಮತ್ತು 1988ರ ಅವಧಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಜನಪ್ರಿಯ ‘ರಾಮಾಯಣ’ ಧಾರಾವಾಹಿಯ ಶ್ರೀರಾಮ ಪಾತ್ರಧಾರಿ ಅರುಣ್‌ ಗೋವಿಲ್‌ ಅವರು ಉತ್ತರ ಪ್ರದೇಶದ ಮೀರಠ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸಮಾಜವಾದಿ ಪಕ್ಷದ ಸುನಿತಾ ವರ್ಮಾ ಅವರೆದುರು ಗೆದ್ದಿದ್ದಾರೆ.

ಕಂಗನಾ ರನೌತ್‌ 

ಬಾಲಿವುಡ್‌ನ ಯಶಸ್ವಿ ನಟಿ ಕಂಗನಾ ರನೌತ್‌ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕಡು ಬೆಂಬಲಿಗರಾಗದ ಇವರು ಈ ವರ್ಷದ ಆರಂಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಆ ಬೆನ್ನಲ್ಲೇ ಅವರಿಗೆ ಚುನಾವಣಾ ಟಿಕೆಟ್‌ ಕೂಡಾ ಘೋಷಿಸಲಾಯಿತು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಮಣಿಸಿದ್ದಾರೆ. 

ಪವನ್‌ ಸಿಂಗ್

ಬೋಜಪುರಿಯ ಜನಪ್ರಿಯ ನಟ ಪವನ್‌ ಸಿಂಗ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಕರಾಟಕ್‌ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಮತ್ತು ಸಿಪಿಎಂನ (ಇಂಡಿಯಾ ಒಕ್ಕೂಟದ ಸದಸ್ಯಪಕ್ಷ) ರಾಜಾರಾಮ್‌ ಸಿಂಗ್‌ ಅವರು ಅಂತಹ ರಾಜಕೀಯ ಪ್ರಮುಖರು ಕಣದಲ್ಲಿದ್ದ ಕ್ಷೇತ್ರದಲ್ಲಿ ಪವನ್‌ ಸೋಲು ಅನುಭವಿಸಿದ್ದಾರೆ.

ಯೂಸುಫ್ ಪಠಾಣ್‌

ಪಶ್ಚಿಮ ಬಂಗಾಳದ ಬಹರಾಮ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಅವರು ಕಾಂಗ್ರೆಸ್‌ ಹಿರಿಯ ನಾಯಕ ಅಧೀರ್ ರಂಜನ್‌ ಚೌಧರಿ ಅವರ ವಿರುದ್ಧ ಗೆಲುವು ದಾಖಲಿಸಿದ್ದಾರೆ. 

ಕಂಗನಾ ರನೌತ್
ಕಂಗನಾ ರನೌತ್
ಪವನ್‌ ಸಿಂಗ್‌
ಪವನ್‌ ಸಿಂಗ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT