ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಜನರ ಉತ್ತಮ ಭವಿಷ್ಯಕ್ಕಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ: ಮೋದಿ

Published 6 ಏಪ್ರಿಲ್ 2024, 14:18 IST
Last Updated 6 ಏಪ್ರಿಲ್ 2024, 14:18 IST
ಅಕ್ಷರ ಗಾತ್ರ

ಸಹರಾನ್‌ಪುರ( ಉತ್ತರ ಪ್ರದೇಶ): ದೇಶದ ಜನರ ಉತ್ತಮ ಭವಿಷ್ಯಕ್ಕಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದರು.

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟರು ಬಡವರ ಕನಸುಗಳನ್ನು ಛಿದ್ರಗೊಳಿಸುತ್ತಿದ್ದಾರೆ. ಅವರ ಹಕ್ಕುಗಳನ್ನು ಅವರಿಂದ ಕಸಿದುಕೊಳ್ಳುವ ಮೂಲಕ ಅವರ ‍ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿದ್ದಾರೆಂದು ಕಿಡಿಕಾರಿದರು.

ನಿಮ್ಮ ಮಗಳು ಅಥವಾ ಮಗನಿಗೆ ಉದ್ಯೋಗ ಪಡೆಯಲು ಅರ್ಹರಾಗಿದ್ದರೂ, ಬೇರೆಯವರು ಕೆಲಸವನ್ನು ಅನ್ಯ ಮಾರ್ಗದ ಮೂಲಕ (ಭ್ರಷ್ಟಾಚಾರ) ಪಡೆದುಕೊಂಡರೆ ನಿಮ್ಮ ಮಕ್ಕಳ ಭವಿಷ್ಯ ಏನಾಗಲಿದೆ? ಎಂದು ಪ್ರಧಾನಿ ಮೋದಿ ಹೇಳಿದರು.

’ನಾನು ಭ್ರಷ್ಟಚಾರದ ವಿರುದ್ಧ ಹೋರಾಡುತ್ತಿದ್ದೇನೆ, ನಾನು ನಿಂದನೆಗೆ ಒಳಾಗಾಗುತ್ತಿದ್ದೇನೆ. ವಿರೋಧ ಪಕ್ಷಗಳು ಭ್ರಷ್ಟರನ್ನು ರಕ್ಷಿಸಲು ರ್‍ಯಾಲಿಯನ್ನು ನಡೆಸುತ್ತಿದ್ದಾರೆ. ಆದರೆ ನಾನು ಇದರಿಂದ ಹಿಂದೆ ಸರಿಯುವುದಿಲ್ಲ, ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯುವುದು. ಇದು ಮೋದಿ ಗ್ಯಾರಂಟಿ‘ ಎಂದರು.

ಸಹರಾನ್‌ಪುರ, ಕೈರಾನಾ, ಮುಜಾಫರ್‌ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ ಮತ್ತು ಪಿಲಿಭಿತ್ ಕ್ಷೇತ್ರಗಳಿಗೆ ಏಪ್ರಿಲ್‌ 19ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್‌ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT