ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಪ್ರಮಾಣದಲ್ಲಿ ವ್ಯತ್ಯಾಸ: ಧ್ವನಿ ಎತ್ತಲು ‘ಇಂಡಿಯಾ’ ನಾಯಕರಿಗೆ ಖರ್ಗೆ ಪತ್ರ

Published 7 ಮೇ 2024, 6:30 IST
Last Updated 7 ಮೇ 2024, 6:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮತದಾನ ಪ್ರಮಾಣದಲ್ಲಿ ವ್ಯತ್ಯಾಸ ಕುರಿತಂತೆ ಚುನಾವಣಾ ಆಯೋಗದ ದತ್ತಾಂಶ ಕುರಿತು ಧ್ವನಿ ಎತ್ತುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಡಿಯಾ ಬಣದ ವಿವಿಧ ನಾಯಕರಿಗೆ ಪತ್ರ ಬರೆದಿದ್ದಾರೆ.

‘ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆ ನಮ್ಮ ಗುರಿಯಾಗಿದ್ದು, ಘೋಷಿತ ಮತದಾನ ಪ್ರಮಾಣದಲ್ಲಿ ವ್ಯತ್ಯಾಶ ಕಂಡುಬಂದರೆ ಧ್ವನಿ ಎತ್ತಿ’ ಎಂದು ಖರ್ಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಚುನಾವಣಾ ಆಯೋಗದ ಸ್ವಾತಂತ್ರ್ಯ ರಕ್ಷಿಸೋಣ ಮತ್ತು ಚುನಾವಣಾ ಆಯೋಗವನ್ನು ಹೊಣೆಗಾರನನ್ನಾಗಿ ಮಾಡೋಣ’ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

‘ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಇಂಡಿಯಾ ಬಣದ ಸಾಮೂಹಿಕ ಜವಾಬ್ದಾರಿಯಾಗಿದೆ. ಈ ಕುರಿತಂತೆ ಚುನಾವಣಾ ಆಯೋಗವನ್ನು ಪ್ರಶ್ನಿಸಿ ಮತ್ತು ಅಂತಿಮ ಮತದಾನದ ಪ್ರಮಾಣದಲ್ಲಿ ವ್ಯತ್ಯಾಸ ಮಾಡುವುದಕ್ಕೆ ಅವಕಾಶ ಕೊಡಬೇಡಿ’ ಎಂದು ತಿಳಿಸಿದ್ದಾರೆ.

‘ಮತದಾನದ ಟ್ರೆಂಡ್ ನೋಡಿ ಪ್ರಧಾನಿ ನರೇದ್ರ ಮೋದಿ ಮತ್ತು ಬಿಜೆಪಿ ನಾಯಕರು ಹತಾಶೆಗೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ನಿರಂಕುಶಾಧಿಕಾರದ ರುಚಿ ಕಂಡಿರುವ, ಅಧಿಕಾರದ ಅಮಲಿನಲ್ಲಿರುವವರು ಅಧಿಕಾರದಲ್ಲಿ ಮುಂದುವರಿಯಲು ಯಾವ ಹಂತಕ್ಕಾದರೂ ಹೋಗಬಲ್ಲರು’ ಎಂದು ಖರ್ಗೆ ಹೇಳಿದ್ದಾರೆ

ಮೊದಲೆರಡು ಹಂತಗಳಲ್ಲಿ ನಡೆದ ಚುನಾವಣೆಯ ದತ್ತಾಂಶ ಬಿಡುಗಡೆಯಲ್ಲಿ ಆದ ವಿಳಂಬದ ಬಗ್ಗೆ ಹಲವು ಪಕ್ಷಗಳು ಈಗಾಗಲೇ ಚುನಾವಣಾ ಆಯೋಗವನ್ನು ಪ್ರಶ್ನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT