ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಎಂಥಾ ಮಾತು: ಸಂಜಯ್‌ ರಾವುತ್‌ ಮತ್ತು ಅಮಿತ್‌ ಶಾ ಹೇಳಿಕೆ...

Published 17 ಮೇ 2024, 1:46 IST
Last Updated 17 ಮೇ 2024, 1:46 IST
ಅಕ್ಷರ ಗಾತ್ರ

‌ಬೃಹತ್‌ ಜಾಹೀರಾತು ಫಲಕ ಕುಸಿದು 16 ಮಂದಿ ಮೃತಪಟ್ಟಿರುವ ಪ್ರದೇಶದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ನಡೆಸಿರುವುದು ಅಮಾನವೀಯ ವರ್ತನೆ. ಘಾಟ್‌ಕೋಪರ್‌ ಪಶ್ಚಿಮದಿಂದ ಪೂರ್ವ ಘಾಟ್‌ಕೋಪರ್‌ವರೆಗೆ ಪ್ರಧಾನಿ ಅವರು ರೋಡ್‌ ಶೋ ನಡೆಸುವುದರಿಂದ ಬುಧವಾರದಿಂದಲೇ ಮೆಟ್ರೊ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ರಸ್ತೆಯಲ್ಲಿ ವಾಹನಗಳ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು. ಒಬ್ಬ ವ್ಯಕ್ತಿಯ ಪ್ರಚಾರಕ್ಕಾಗಿ ಇಲ್ಲಿ ಹಿಂದೆಂದೂ ರಸ್ತೆ ಬಂದ್‌ ಮಾಡಿರಲಿಲ್ಲ. ಇದರಿಂದ ಜನರು ತೊಂದರೆ ಅನುಭವಿಸಿದ್ದಾರೆ 

ಸಂಜಯ್‌ ರಾವುತ್‌, ಶಿವಸೇನಾ ಉದ್ಧವ್‌ ಠಾಕ್ರೆ ಬಣ

ದೇಶವು ‍ಪ್ರಬಲ ಪ್ರಧಾನಿಯನ್ನು ಬಯಸುತ್ತಿದೆ. ವರ್ಷಕೊಬ್ಬ ಪ್ರಧಾನಿಯನ್ನು ಬಯಸುವುದಿಲ್ಲ. ‘ಇಂಡಿಯಾ’ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸಲು ದೇಶವು ನಿರ್ಧರಿಸಿದೆ. ‘ಇಂಡಿಯಾ’ ಒಕ್ಕೂಟವು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರದು. ಒಂದು ವೇಳೆ ಬಂದರೆ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್ ಅಥವಾ ಲಾಲು ಪ್ರಸಾದ್‌ ಇವರಲ್ಲಿ ಯಾರು ಪ್ರಧಾನಿಯಾಗುತ್ತಾರೆ? ದೇಶ ನಡೆಸುವುದು ದಿನಸಿ ಅಂಗಡಿ ನಡೆಸಿದಂತಲ್ಲ. ಕೋವಿಡ್‌ನಂತಹ ಸನ್ನಿವೇಶ ಮತ್ತೆ ಎದುರಾದರೆ ಅವರು ದೇಶವನ್ನು ಕಾಪಾಡಬಹುದೇ?

ಅಮಿತ್‌ ಶಾ, ಕೇಂದ್ರ ಗೃಹಸಚಿವ

ಅಮಿತ್‌ ಶಾ
ಅಮಿತ್‌ ಶಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT