ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಭಯದಿಂದ ಪ್ರಧಾನಿ ಪ್ರಚಾರಕ್ಕೆ ಬಂದಿಲ್ಲ: ಪವನ್‌ ಖೇರಾ

Published 17 ಏಪ್ರಿಲ್ 2024, 16:24 IST
Last Updated 17 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಶಿವಸಾಗರ: ಚಹಾ ತೋಟದ ಕಾರ್ಮಿಕರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಕಾರಣ, ಭಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪರ್‌ ಅಸ್ಸಾಂ ಪ್ರದೇಶದಲ್ಲಿ ಪ್ರಚಾರಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಬುಧವಾರ ಹೇಳಿದರು.

'ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣ ನೀಡಿ ರಾಹುಲ್‌ ಗಾಂಧಿ ಅವರ ‘ನ್ಯಾಯ ಯಾತ್ರೆ’ಗೆ ಗುವಾಹಟಿಯಲ್ಲಿ ಅನುಮತಿ ನೀಡಿರಲಿಲ್ಲ. ಈಗ ಮೋದಿ ಅವರು ವಾಹನ ದಟ್ಟಣೆ ಇರುವ ಗುವಾಹಟಿ–ಶಿಲ್ಲಾಂಗ್‌ ರಸ್ತೆಯಲ್ಲಿ ರೋಡ್‌ ಶೋ ನಡೆಸುತ್ತಿದ್ದಾರೆ’ ಎಂದರು.

‘ಅಸ್ಸಾಂನಲ್ಲಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಚಹಾ ತೋಟದ ಕಾರ್ಮಿಕರ ದಿನಗೂಲಿ ಈಗಲೂ ₹250ಕ್ಕಿಂತ ಹೆಚ್ಚಳವಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT