ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಮೋದಿ ನಾಯಕತ್ವದಡಿ ದಾಖಲೆ ಮತದಾನ: ರವಿಂದರ್‌ ರೈನಾ

Published 26 ಮೇ 2024, 14:10 IST
Last Updated 26 ಮೇ 2024, 14:10 IST
ಅಕ್ಷರ ಗಾತ್ರ

ಜಮ್ಮು: ಕೇಂದ್ರಾಡಳಿತ ಪ್ರದೇಶದ ಐದು ಲೋಕಸಭಾ ಕ್ಷೇತ್ರಗಳಿಗೆ ದಾಖಲೆಯ ಮತದಾನವಾಗಿರುವುದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಹೊಸ ಜಮ್ಮು–ಕಾಶ್ಮೀರವನ್ನು ಪ್ರತಿಬಿಂಬಿಸುತ್ತಿದೆ ಎಂದು ಬಿಜೆಪಿ ಮುಖಂಡ ರವಿಂದರ್‌ ರೈನಾ ಭಾನುವಾರ ಬಣ್ಣಿಸಿದರು.

ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆಗಾಗಿ ಪಕ್ಷವು ಪೂರ್ಣವಾಗಿ ಸಿದ್ಧವಾಗಿದೆ ಎಂದು ಬಿಜೆಪಿ ಜಮ್ಮು–ಕಾಶ್ಮೀರ ಘಟಕದ ಅಧ್ಯಕ್ಷರೂ ಆಗಿರುವ ಅವರು ತಿಳಿಸಿದರು.

ಮುಂದಿನ ಚುನಾವಣೆಗಳಲ್ಲೂ ಇಲ್ಲಿನ ಜನರು ಇದೇ ಹುಮ್ಮಸ್ಸಿನಿಂದ ಮತದಾನ ಮಾಡುವ ವಿಶ್ವಾಸವಿದೆ ಎಂದರು.

‘ಮೋದಿ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಹೋದರತ್ವವನ್ನು ಸ್ಥಾಪಿಸಿದೆ. ಈ ಕಾರಣಕ್ಕೆ ಜನರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ’ ಎಂದು ರವಿಂದರ್‌ ಹೇಳಿದರು.

ಜಮ್ಮು–ಕಾಶ್ಮೀರದ ಐದು ಕ್ಷೇತ್ರಗಳಲ್ಲಿ ಶೇ 58.11ರಷ್ಟು ಮತದಾನವಾಗಿದ್ದು, ಇದು ಕಳೆದ 35 ವರ್ಷಗಳಲ್ಲೇ ದಾಖಲಾದ ಅತ್ಯಧಿಕ ಮತದಾನವಾಗಿದೆ.

ಉಧಂಪುರ ಕ್ಷೇತ್ರದಲ್ಲಿ ಶೇ 68ರಷ್ಟು, ಜಮ್ಮುನಿನಲ್ಲಿ ಶೇ 69.1, ಶ್ರೀನಗರದಲ್ಲಿ ಶೇ 38ರಷ್ಟು, ಬಾರಾಮುಲ್ಲಾದಲ್ಲಿ ಶೇ 58.17ರಷ್ಟು ಹಾಗು ಅನಂತನಾಗ್‌–ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಶೇ 53ರಷ್ಟು ಮತದಾನ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT