ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಅಣ್ಣಾಸಾಹೇಬ ಪತ್ನಿ ಆಸ್ತಿಯಲ್ಲಿ ಭಾರಿ ಇಳಿಕೆ

Published 16 ಏಪ್ರಿಲ್ 2024, 4:54 IST
Last Updated 16 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಒಟ್ಟು ಆಸ್ತಿ ₹21.62 ಕೋಟಿ. ಕಳೆದ ವರ್ಷಕ್ಕೆ ಹೋಲಿಸಿದರೆ ₹85 ಲಕ್ಷ ಹೆಚ್ಚಾಗಿದೆ. ಆದರೆ, ಅವರ ಪತ್ನಿ, ಶಾಸಕಿ ಶಶಿಕಲಾ ಜೊಲ್ಲೆ ಅವರ ಆಸ್ತಿ ₹39.04 ಕೋಟಿ ಕಡಿಮೆ ಆಗಿದೆ.

ಕಳೆದ ವರ್ಷದ ವಿಧಾಸನಭಾ ಚುನಾವಣೆ ವೇಳೆ ಶಶಿಕಲಾ ಒಟ್ಟು ₹68.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು. ಈಗ ಅವರ ಪತಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ₹29.54 ಕೋಟಿ ಮಾತ್ರವಿದೆ. ಈ ಬಾರಿ ದಂಪತಿ ತಮ್ಮ ಒಬ್ಬ ಪುತ್ರ ಹಾಗೂ ಸೊಸೆಯ ಆಸ್ತಿ ವಿಭಜಿಸಿ, ₹1 ಲಕ್ಷ ಎಂದು ತೋರಿಸಿದ್ದಾರೆ. ಇನ್ನೊಬ್ಬ ಪುತ್ರ ಹಾಗೂ ಸೊಸೆಯ ಆಸ್ತಿ ತೋರಿಸಿಲ್ಲ.

ಅಣ್ಣಾಸಾಹೇಬ ಅವರು ₹5.83 ಕೋಟಿ ಚರಾಸ್ತಿ ಮತ್ತು ₹15.79 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ₹67.68 ಲಕ್ಷ ಮೌಲ್ಯದ 5 ಕಾರು ಮತ್ತು 3 ದ್ವಿಚಕ್ರ ವಾಹನಗಳಿವೆ.

ಅಣ್ಣಾಸಾಹೇಬ ಜೊಲ್ಲೆ

ಅಭ್ಯರ್ಥಿಯ ಹೆಸರು; ಅಣ್ಣಾಸಾಹೇಬ ಜೊಲ್ಲೆ

ಪಕ್ಷ; ಬಿಜೆಪಿ

ಒಟ್ಟು ಆಸ್ತಿಯ ಮೌಲ್ಯ; ₹21.62 ಕೋಟಿ

ನಗದು; ₹1.25 ಲಕ್ಷ

ಒಟ್ಟು ಚರಾಸ್ತಿ; ₹5.83 ಕೋಟಿ

ಸ್ಥಿರಾಸ್ತಿ; ₹15.79 ಕೋಟಿ

ವಾಹನ; 5 ಕಾರು, 3 ದ್ವಿಚಕ್ರವಾಹನ. ₹67.68 ಲಕ್ಷ ಮೌಲ್ಯ

ಚಿನ್ನ, ಬೆಳ್ಳಿ; ₹1.08 ಕೋಟಿ

ಸಾಲ; ₹12.40 ಕೋಟಿ

ಅಪರಾಧ ಪ್ರಕರಣ; ಇಲ್ಲ

ಪತ್ನಿ ಶಾಸಕಿ ಶಶಿಕಲಾ ಜಿಲ್ಲೆ

ಒಟ್ಟು ಆಸ್ತಿಯ ಮೌಲ್ಯ; ₹29.54 ಕೋಟಿ

ನಗದು: ₹1.10 ಲಕ್ಷ

ಒಟ್ಟು ಚರಾಸ್ತಿ; ₹4.12 ಕೋಟಿ

ಸ್ಥಿರಾಸ್ತಿ; ₹25.42 ಕೋಟಿ

ವಾಹನ; ಇಲ್ಲ

ವಜ್ರ, ಚಿನ್ನ, ಬೆಳ್ಳಿ; ₹86.61 ಲಕ್ಷ

ಸಾಲ; ₹9.54 ಕೋಟಿ

ಅಪರಾಧ ಪ್ರಕರಣ: ಇಲ್ಲ

ಮಗ– ಸೊಸೆ ಬಳಿ ₹1 ಲಕ್ಷದಷ್ಟು ಆಸ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT