ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ತ್ರಿಪುರಾ ಪಶ್ಚಿಮ

Published 6 ಏಪ್ರಿಲ್ 2024, 23:54 IST
Last Updated 6 ಏಪ್ರಿಲ್ 2024, 23:54 IST
ಅಕ್ಷರ ಗಾತ್ರ

ವಿಪ್ಲವ್‌ ಕುಮಾರ್‌ ದೇವ್‌ (ಬಿಜೆಪಿ)

ಸಿಪಿಎಂನ ಭದ್ರಕೋಟೆಯಾಗಿದ್ದ ತ್ರಿಪುರಾದಲ್ಲಿ ಪ್ರಬಲ ಹಿಂದುತ್ವ ನಾಯಕರಾಗಿ ಮುಂಚೂಣಿಗೆ ಬಂದಿರುವ ವಿಪ್ಲವ್ ಕುಮಾರ್‌ ದೇವ್‌ ಅವರು ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸಿದ್ದ ಎರಡಂಗದ ಜೊತೆಗೆ ಸೆಣಸಿ 2018ರಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಪ್ಲವ್‌ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಬಿಜೆಪಿಯು ಮುಖ್ಯಮಂತ್ರಿ ಸ್ಥಾನವನ್ನು ನೀಡಿತ್ತು. ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಚರ್ಚೆಯಲ್ಲಿರುತ್ತಿದ್ದ ವಿಪ್ಲವ್‌ ಅವರು ಅನಂತರ ಪಕ್ಷಕ್ಕೂ ತಲೆನೋವಾಗಿ ಪರಿಣಮಿಸಿದ್ದರು. ಈ ಕಾರಣಕ್ಕಾಗಿಯೇ 2022ರಲ್ಲಿ ವಿಪ್ಲವ್‌ ಅವರ ಬದಲಿಗೆ ಪಕ್ಷದ ಹಿರಿಯ ನಾಯಕ ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ನೇಮಕ ಮಾಡಿತ್ತು. ವಿಪ್ಲವ್‌ ಅವರು ಬಿಜೆಪಿ ತ್ರಿಪುರಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಆಶಿಶ್‌ ಕುಮಾರ್‌ ಸಹಾ (ಕಾಂಗ್ರೆಸ್‌)

ತ್ರಿಪುರಾ ಪಶ್ಚಿಮ ಕ್ಷೇತ್ರದಲ್ಲಿ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌, ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಆಶಿಶ್‌ ಕುಮಾರ್‌ ಸಹಾ ಅವರನ್ನು ಸ್ಪರ್ಧೆಗಿಳಿಸಿದೆ. ಇವರು ಸ್ಥಳೀಯವಾಗಿ ಪ್ರಭಾವಿ ನಾಯಕರಾಗಿರುವುದು ಕಾಂಗ್ರೆಸ್‌ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಸಿಪಿಎಂ ಜೊತೆ ಮೈತ್ರಿ ಮಾಡಿಕೊಂಡದ್ದನ್ನು ವಿರೋಧಿಸಿ 2016ರಲ್ಲಿ ಪಕ್ಷ ತೊರೆದು ಟಿಎಂಸಿಗೆ ಸೇರ್ಪಡೆಗೊಂಡಿದ್ದ ಆಶಿಶ್‌, 2016ರಲ್ಲಿ ಕಮಲ ಪಾಳಯಕ್ಕೆ ಸೇರಿದ್ದರು. 2018ರಲ್ಲಿ ‌ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. 2022ರಲ್ಲಿ ಕಾಂಗ್ರೆಸ್‌ಗೆ ಮರಳಿದ್ದರು. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಣಿಕ್‌ ಸಹಾ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT