ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.16ರಂದು ಕ್ಯಾಲಿಗ್ರಫಿ ಕಾರ್ಯಾಗಾರ

Last Updated 14 ಮಾರ್ಚ್ 2019, 20:00 IST
ಅಕ್ಷರ ಗಾತ್ರ

‘ಆ ರ್ಟ್‌ಕಿಬರಸಾತ್‌’ ಸಂಸ್ಥೆಯು ಕೋರಮಂಗಲ ದಲ್ಲಿನ ಆಟ ಗಲಾಟದ ಸಹಯೋಗದೊಂದಿಗೆ ಮಾರ್ಚ್‌ 16ರಂದು ಹಸ್ತಾಕ್ಷರಕ್ಕೆ (ಕ್ಯಾಲಿಗ್ರಫಿ) ಸಂಬಂಧಿಸಿದ ಕಾರ್ಯಾಗಾರ ಹಮ್ಮಿಕೊಂಡಿದೆ.

‘ಡಿಪ್‌ ಪೆನ್‌’ ಮತ್ತು ಮೊನಚಾದ ನಿಬ್‌ ಹೊಂದಿರುವ ಪೆನ್ನುಗಳ ಸಹಾಯದಿಂದ ಸುಂದರವಾಗಿ ಬರೆಯುವುದನ್ನು ಈ ವೇಳೆ ಹೇಳಿಕೊಡಲಾಗುತ್ತದೆ.

ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ಬರವಣಿಗೆಗೆ ಬೇಕಾಗುವ ಸಲಕರಣೆಗಳಾದ ‘ಸ್ಪೆಸಿಮೆನ್‌ ಶೀಟ್‌’, ‘ಪ್ರಾಕ್ಟೀಸ್‌ ಶೀಟ್‌’, ಡಿಪ್‌ ಪೆನ್‌, ಪಾಯಿಂಟೆಡ್‌ ನಿಬ್‌ ಪೆನ್‌, ಇಂಕ್‌ ಪಾಟ್‌ಗಳನ್ನು ನೀಡಲಾಗುತ್ತದೆ. ಕಾರ್ಯಾಗಾರದ ನಂತರ ಈ ಸಲಕರಣೆಗಳನ್ನು ತರಬೇತಿಗೆ ಬಂದಿದ್ದವರೇ ತೆಗೆದುಕೊಂಡು ಹೋಗಬಹುದು.

ಬರವಣಿಗೆ, ಲಿಪಿಯ ಸೌಂದರ್ಯ ಹೆಚ್ಚಿಸುವುದಕ್ಕೆ ಬೇಕಾದ ಸಲಹೆ, ಸೂಚನೆ, ಮಾರ್ಗದರ್ಶನವನ್ನು ಈ ವೇಳೆ ನೀಡಲಾಗುತ್ತದೆ.

ಸ್ಥಳ: ಆಟ ಗಲಾಟ, ನಂ– 134, ಕೆಎಚ್‌ಬಿ ಕಾಲೊನಿ, ಕೋರಮಂಗಲ. ತರಬೇತಿ ಅವಧಿ: ಮಾರ್ಚ್‌ 16ರ ಬೆಳಿಗ್ಗೆ 11ರಿಂದ ಮಧ್ಯಾಹ್ನ 2. ಪ್ರವೇಶ ಶುಲ್ಕ: ತಲಾ ₹ 1,500. ಮಾಹಿತಿಗೆ : 080– 4160 0677 / 96325 10126

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT