ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಬಂತು ಕೆಜಿಎಫ್: ನೀವು ಓದಲೇಬೇಕಾದ 10 ಸುದ್ದಿಗಳು

Last Updated 21 ಡಿಸೆಂಬರ್ 2018, 3:40 IST
ಅಕ್ಷರ ಗಾತ್ರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಹತ್ವಾಕಾಂಕ್ಷಿ ಚಿತ್ರ‘ಕೆಜಿಎಫ್’ ಗುರುವಾರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂಜಾನೆ ನಾಲ್ಕು ಗಂಟೆಯಿಂದಲೇ ವಿಶೇಷ ಪ್ರದರ್ಶನಗಳು ನಡೆಯುತ್ತಿವೆ.‘ಕೆಜಿಎಫ್‌’ ಬಗ್ಗೆ ತಿಳಿದುಕೊಳ್ಳಲು ನೀವು ಓದಲೇಬೇಕಾದ 10 ಸುದ್ದಿಗಳು ಇಲ್ಲಿವೆ.

1) ಯಶ್‌ ಬಿಚ್ಚಿಟ್ಟ ‘ಕೆಜಿಎಫ್‌’ಸತ್ಯಗಳು!

ನಾಲ್ಕು ವರ್ಷದ ಹಿಂದೆ ಮೊಳೆತ ಈ ಚಿನ್ನದ ಕನಸಿನ ಕುರಿತು ನಾಯಕನಟ ಯಶ್ ‘ಪ್ರಜಾವಾಣಿ’ ನೀಡಿರುವ ವಿಶೇಷ ಸಂದರ್ಶನದಲ್ಲಿಮಾತನಾಡಿದ್ದಾರೆ.

https://bit.ly/2rQgpeR

2) ಕೆಜಿಎಫ್‌: ಬರಲಿದೆಯೇ ಇನ್ನೊಂದು ಭಾಗ? ಬಜೆಟ್ ಎಷ್ಟು?

ಕೆಜಿಎಫ್‌ ಸಿನಿಮಾದ ಇನ್ನೂ ಒಂದು ಭಾಗ ನಿರ್ದೇಶಕರ ಮನಸ್ಸಿನಲ್ಲಿ ಇದೆಯೇ? ಈ ಸಿನಿಮಾ ನಂತರ ಅದು ಕೂಡ ತೆರೆಯ ಮೇಲೆ ಮೂಡಿಬರಲಿದೆಯೇ????

https://bit.ly/2QJAMJx

3) ಶ್ರೀನಿಧಿ ಶೆಟ್ಟಿ: ‘ಕೆಜಿಎಫ್‘ ಚಿನ್ನದ ಗಣಿಯಲ್ಲಿ ಸಿಕ್ಕ ನಿಧಿ

‘ಕೆಜಿಎಫ್‌‘ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ, ತಮ್ಮ ಪಾಲಿಗೆ ಸಿಕ್ಕ ನಿಧಿ ಎನ್ನುವುದು ಶ್ರೀನಿಧಿ ಶೆಟ್ಟಿ ಮನದಾಳದ ಮಾತು. ‘ಪ್ರಜಾವಾಣಿ’ಬಳಗದ ‘ಸುಧಾ’ ವಾರಪತ್ರಿಕೆಗೆ ಶ್ರೀನಿಧಿ ಶೆಟ್ಟಿ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

https://bit.ly/2BwaOie

4) ಕೆಜಿಎಫ್‌ ದೂಳಿನಲ್ಲಿ ಖಳನ ಹೊಳಪು

ಗಡುಸು ಮುಖ, ಕೆಂಡಕಾರುವ ಕಣ್ಣುಗಳು, ಕಟ್ಟುಮಸ್ತು ದೇಹ, ಕ್ರೌರ್ಯದ ಶಾರೀರರೂಪದಂತೆ ಭಾಸವಾಗುವ ಧ್ವನಿ... ‘ಆ್ಯಕ್ಷನ್’ ಎಂಬ ಸದ್ದು ಕೇಳಿದಾಕ್ಷಣ ಆ ವ್ಯಕ್ತಿ ಅಕ್ಷರಶಃ ರಾಕ್ಷಸನಾಗಿಬಿಡುತ್ತಾನೆ. ಕೆಜಿಎಫ್‌ನ ಖಳನಟ ಜಾನ್ ಕೊಕೇನ್ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿವ ಬರಹ ಇದು.

https://bit.ly/2RcA3Qy

5) ಕೆಜಿಎಫ್‌ಗಾಗಿ ಸ್ನಾನ ಬಿಟ್ಟ ಪ್ರಶಾಂತ್‌ ನೀಲ್‌!

ನಿರ್ದೇಶಕ ಪ್ರಶಾಂತ್ ನೀಲ್‌ ಕೆಜಿಎಫ್‌ ಕೆಲಸದಲ್ಲಿ ಪೂರ್ತಿ ಬ್ಯುಸಿಯಾಗಿದ್ದಾರೆ. ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ ಎಂಟ್ಹತ್ತು ದಿನಗಳಿಂದ ಸ್ನಾನವನ್ನೂ ಮಾಡಿಲ್ಲವಂತೆ.

https://bit.ly/2R8UxJN

6) 2 ಸಾವಿರ ಥಿಯೇಟರ್‌ಗೆ ‘ಕೆಜಿಎಫ್‌’; ಫೇಸ್‌ಬುಕ್‌ ಲೈವ್‌ ಮೇಲೆ ಹದ್ದಿನಕಣ್ಣು

'ತಪ್ಪು ಮಾಡಿದ ಬಳಿಕ ಅಣ್ಣಾ ನಾನು ನಿಮ್ಮ ಅಭಿಮಾನಿ ಎಂದರೆ ಪೊಲೀಸರು ಸುಮ್ಮನಿರುವುದಿಲ್ಲ’ ಎಚ್ಚರಿಸುತ್ತಾರೆ ಯಶ್.

https://bit.ly/2T0jHHV

7) ಡಬ್ಬಿಂಗ್ ಚರ್ಚೆಗೆ ಕಾವು ಕೊಟ್ಟ ‘ಕೆಜಿಎಫ್‌’

‘ಕನ್ನಡ ಭಾಷೆಗೆ ಒಳ್ಳೆಯದಾಗುತ್ತದೆ ಎಂದಾದರೆ ನನ್ನದೇನೂ ವಿರೋಧ ಇಲ್ಲ. ಆದರೆ, ಡಬ್ಬಿಂಗ್‌ನಿಂದ ಸ್ಥಳೀಯ ಕಲಾವಿದರಿಗೆ ತೊಂದರೆ ಆಗುತ್ತದೆ. ಅದರ ಬಗ್ಗೆಯೂ ಗಮನ ನೀಡಬೇಕು’ ಎಂದಿದ್ದರು ಯಶ್.

https://bit.ly/2BwfTqT

8) ‘ಕೆಜಿಎಫ್‌’ ರಿಲೀಸ್‌ಗೆ ಕೆಜಿಎಫ್‌ ಕಾತರ

ನಟ ಯಶ್‌ ಅವರನ್ನು ನೋಡಲು ಹೋಗಿ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದ ಅಭಿಮಾನಿಗಳು ನಿರಾಸೆಯಿಂದ ವಾಪಸ್ ಬಂದಿದ್ದರು. ಈಗ ಕೊನೆಗೂ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ನಗರದಲ್ಲಿ ಕುತೂಹಲ ಮೂಡಿಸಿದೆ.

https://bit.ly/2T4CDp2

9) ಕೆಜಿಎಫ್ ಸಿನಿಮಾ ಹಾಡಿಗೆ ಕಿನ್ನಾಳದ ರಾಜ ಸಾಹಿತ್ಯ

ಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆದ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ರಾಜ ಕಿನ್ನಾಳ ಅವರ ಗೀತೆ ವೈರಲ್ ಆಗಿದ್ದು, ಸ್ಥಳೀಯ ಪ್ರತಿಭೆಗೆ ಸಂದ ಗೌರವವಾಗಿದೆ
https://bit.ly/2Bvhayh

10) ಸುಮ್ನೆ ಬೈಬೇಡಿ: ಕೆಜಿಎಫ್‌ ಹಾಡಲ್ಲಿ ಕನ್ನಡವೂ ಉಂಟು!

‘ಕನ್ನಡ ಸಿನಿಮಾ ಹಾಡು ಅಂತೀರಾ, ಎಲ್ಲಿ ಒಂದಕ್ಷರವೂ ಕನ್ನಡ ಕಾಣ್ತಾ ಇಲ್ವಲ್ಲಾ’ ಎಂಬ ಅನುಮಾನ ಖಂಡಿತ ನಿಮ್ಮ ಮನಸೊಳಗೆ ಸುಳಿದುಹೋಗಿರುತ್ತದೆ. ಇದೆ. ಖಂಡಿತ ಈ ಹಾಡಿನಲ್ಲಿ ಒಂದಿಷ್ಟು ಕನ್ನಡದ ಶಬ್ದಗಳಿವೆ.

https://bit.ly/2SdhlFJ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT