‘ಅಸುರ ಸಂಹಾರ’ ಚಿತ್ರೀಕರಣ ಮುಕ್ತಾಯ

7

‘ಅಸುರ ಸಂಹಾರ’ ಚಿತ್ರೀಕರಣ ಮುಕ್ತಾಯ

Published:
Updated:

ಶ್ರೀ ಚಂಡಿಕೇಶ್ವರಿ ಕ್ರಿಯೇಷನ್ಸ್ ಲಾಂಛನದಲ್ಲಿ ಹರಿಪ್ರಸಾದ್ ನಿರ್ಮಾಣದ ‘ಅಸುರ ಸಂಹಾರ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಪ್ರದೀಪ್ ಅರಸು ನಿರ್ದೇಶಿಸಿರುವ, ಈ ಚಿತ್ರಕ್ಕೆ ಲೋಕಿ ಸಂಗೀತ ನೀಡಿದ್ದು ಬೆಟ್ಟೇಗೌಡ ಕಿಲಾರ ಮತ್ತು ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ಸಾಹಸ ಡಿಫರೆಂಟ್ ಡ್ಯಾನಿ, ಸಂಕಲನ ವಿನಯ್ ಕುಮಾರ್ ಕೂರ್ಗ್ ಅವರದು. ತಾರಾಗಣದಲ್ಲಿ ಹರ್ಷ ಅರಸು, ಹರ್ಷಾಲ ಹನಿ, ಶಿವು ಬಾಲಾಜಿ, ಧಮಾರಾಜ್, ವೀಣಾ ಸುಂದರ್, ಭಾಮ, ಅಶ್ವತ್ಥ್‌, ವಿನಯ್ ಹರಿಬ್ರಹ್ಮ ಮುಂತಾದವರಿದ್ದಾರೆ. ಹಾಸನ, ಮಂಗಳೂರು, ಬೆಂಗಳೂರು, ಶ್ರವಣಬೆಳಗೊಳ, ತಿಪಟೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಹೆಣ್ಣಿನ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಅಪರಾಧಗಳಿಗೆ ಕಾನೂನಿನಡಿ ಯಾಕೆ ಕಠಿಣ ಶಿಕ್ಷೆಗಳನ್ನು ನೀಡಲು ಸಾಧ್ಯವಾಗುತಿಲ್ಲ ಮತ್ತು ಅಂತಹ ಕಠಿಣ ಶಿಕ್ಷೆ ನೀಡಿದರೆ ಏನಾಗುತ್ತದೆ ಎಂಬ ಸಾಮಾಜಿಕ ಕಳಕಳಿಯೇ ಚಿತ್ರದ ಕಥಾವಸ್ತು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !