ಸಿದ್ದಾರ್ಥ್ ಮಲ್ಹೋತ್ರ ಮತ್ತು ಪರಿಣಿತಿ ಚೋಪ್ರಾ ನಟನೆಯ ‘ಜಬರಿಯಾ ಜೋಡಿ’ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ.

ಈ ಕಾಮಿಡಿ ಡ್ರಾಮಾವನ್ನು ಶೋಭಾ ಕಪೂರ್ ಹಾಗೂ ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ಪ್ರಶಾಂತ್ ಸಿಂಗ್ ನಿರ್ದೇಶಿಸಿದ್ದಾರೆ. ಆಗಸ್ಟ್ 2 ರಂದು ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಅಪರಶಕ್ತಿ ಖುರಾನಾ, ಸಂಜಯ್ ಮಿಶ್ರಾ, ನೀರಜ್ ಸೂದ್, ಗೋಪಾಲ್ ದತ್, ಜಾವೇದ್ ಜಾಫ್ರೆ, ಚಂದನ್ ರಾಯ್ ಸನ್ವಾಲ್ ನಟಿಸಿದ್ದಾರೆ.

ಅಬಯ್ ಹಾಗೂ ಬಬ್ಲಿಯ ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಬಿಹಾರದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಚಿತ್ರಿಸಲಾಗಿದೆ. ಮದುಮಗಳನ್ನು ಅಪಹಿಸುವ ಯುವಕರ ತಂಡ, ಬಳಿಕ ಆಕೆಯ ಕುಟುಂಬದಿಂದ ಸಾಕಷ್ಟು ತೊಂದರೆ ಅನುಭವಿಸುತ್ತದೆ. ವರದಕ್ಷಿಣೆ ವಿರುದ್ಧ ಹೋರಾಡುವ ಕತೆ ಕೂಡ ಹೌದು.

ಒಂದು ಸ್ಪಷ್ಟ ಉದ್ದೇಶ ಹೊಂದಿರುವ ಸಿನಿಮಾ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘ಬಿಹಾರದ ಭಾಷೆಯನ್ನು ಕಲಿತು ನಟಿಸುವುದು ಆರಂಭದಲ್ಲಿ ಕಷ್ಟವಾಯಿತು. ಬಳಿಕ ಇದೊಂದು ಉತ್ತಮ ಭಾಷೆ ಎನಿಸಿತು. ನಮ್ಮ ತಂಡ ಈ ಭಾಷೆ ಕಲಿಸಲು ಕಷ್ಟಪಟ್ಟಿದೆ. ವೀಕ್ಷಕರಿಗೆ ಶುದ್ಧವಾಗಿ ಕೇಳುವಂತೆ ಮಾಡುವ ಸವಾಲು ಅವರ ಮೇಲಿತ್ತು. ಹಾಸ್ಯಭರಿತ ಪ್ರೇಮ ಕತೆ ಇರುವ ಸಿನಿಮಾ ಮಾಡುವುದು ನಿಜಕ್ಕೂ ಖುಷಿಯ ವಿಚಾರ’ ಎಂದು ನಟ ಸಿದ್ದಾರ್ಥ್ ಹೇಳಿದ್ದಾರೆ.

‘ಕೆಲವು ಡೈಲಾಗ್‌ಗಳನ್ನು ಹೇಳುವಾಗ ನಗು ಬರುತ್ತಿತ್ತು. ಜೋ ಬೀ ಹೈ ತುಮ್ ತುಮ್ಹಾರಾ ಜಬರಿಯಾ ಶಾದಿ ಕರ್ವಾವೂಂಗಾ’ ರೀತಿಯ ಸಂಭಾಷಣೆ ಚಿತ್ರತಂಡವನ್ನು ನಗೆಗಡಲಿನಲ್ಲಿ ತೇಲಿಸಿತ್ತು’ ಎಂದು ಅವರು ಚಿತ್ರೀಕರಣದ ಅನುಭವ ಹಂಚಿಕೊಂಡಿದ್ದಾರೆ.

ಸಿದ್ದಾರ್ಥ್ ಹಾಗೂ ಪರಿಣಿತಿ ಜೋಡಿ ಈ ಮೊದಲು ‘ಹಸೀ ತೊ ಫಸೀ’ ಸಿನಿಮಾದಲ್ಲಿ ಕಾಣಿಸಿಕೊಂಡಿತ್ತು. ಈಗ ಅದೇ ರೀತಿಯ ಹಾಸ್ಯಭರಿತ ಸಿನಿಮಾದಲ್ಲಿ ತೊಡಗಿಕೊಂಡಿದೆ.

‘ಹಿಂದಿನ ಸಿನಿಮಾಕ್ಕಿಂತ ಈ ಸಿನಿಮಾದಲ್ಲಿ ಹೆಚ್ಚು ಹಾಸ್ಯ, ಕೆಲವು ಕಡೆ ಗಂಭೀರತೆ, ಇನ್ನು ಕೆಲವು ಕಡೆ ಪ್ರೌಢತೆಯ ಮಿಶ್ರಣ ಇದೆ’ ಎಂದು ಪರಿಣಿತಿ ಚೋಪ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.