ಬುಧವಾರ, ಸೆಪ್ಟೆಂಬರ್ 23, 2020
23 °C

ಜಾಹ್ನವಿ ಜೊತೆ ಕಾರ್ತಿಕ್‌ ರೊಮ್ಯಾನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2008ರಲ್ಲಿ ಜಾನ್‌ ಅಬ್ರಹಾಂ, ಅಭಿಷೇಕ್‌ ಬಚ್ಚನ್‌ ಹಾಗೂ ಪ್ರಿಯಾಂಕಾ ಚೋಪ್ರಾ ತಾರಾಗಣದ ’ದೋಸ್ತಾನಾ' ಚಿತ್ರವು ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದಿತ್ತು. ಈಗ ನಿರ್ದೇಶಕ ಕರಣ್‌ ಜೋಹರ್‌ ‘ದೋಸ್ತಾನಾ 2’ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. 

ಈ ಚಿತ್ರದಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ ಹಾಗೂ ಕಾರ್ತಿಕ್‌ ಆರ್ಯನ್‌ ಅವರು ರೋಮ್ಯಾನ್ಸ್‌ ಮಾಡಲಿದ್ದಾರೆ. ದೋಸ್ತಾನಾ– 2 ಚಿತ್ರದ  ಬಗ್ಗೆ ಈ ಮುಂಚಿನಿಂದಲೇ ಸುದ್ದಿ ಕೇಳಿಬರುತ್ತಿತ್ತು. ಈಗ ಸ್ವತಃ ಕರಣ್‌ ಜೋಹರ್‌ ಅವರೇ ಪ್ರಮುಖ ಪಾತ್ರಗಳಿಗೆ ಜಾಹ್ನವಿ ಹಾಗೂ ಕಾರ್ತಿಕ್‌ ಹೆಸರನ್ನು ಅಂತಿಮಗೊಳಿಸಿದ್ದಾರೆ.  ತಮ್ಮ ಟ್ವಿಟ್ಟರ್‌ ಅಕೌಂಟ್‌ನಲ್ಲಿ 20 ನಿಮಿಷದ ವಿಡಿಯೊ ಹಂಚಿಕೊಂಡಿರುವ ಅವರು, ಹೊಸ ಚಿತ್ರದ ಸುಳಿವು ಕೊಟ್ಟಿದ್ದಾರೆ. 

ಈ ಹಿಂದೆ ‘ದೋಸ್ತಾನಾ 2’ ಬಗ್ಗೆ ಸುದ್ದಿ ಬಂದಾಗಲೆಲ್ಲಾ ಬೇರೆ ಬೇರೆ ನಟ– ನಟಿಯರ ಹೆಸರು ಕೇಳಿಬರುತ್ತಿತ್ತು. ಈಗ ಎಲ್ಲಾ ಗಾಳಿಸುದ್ದಿಗಳಿಗೆ ತೆರೆ ಎಳೆದಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು