ಗುರುವಾರ , ಅಕ್ಟೋಬರ್ 22, 2020
22 °C

ಎಣ್ಣೆ ಸಾಂಗ್‌ಗೆ ಕುಣಿದ ಬಿರಾದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನಕ್ಕೂ ಮತ್ತು ಎಣ್ಣೆ ಸಾಂಗ್‌ಗೂ ಬಿಡಿಸಲಾಗದ ನಂಟು. ಇತ್ತೀಚೆಗೆ ಸಿನಿಮಾಗಳಲ್ಲಿ ಎಣ್ಣೆ ಸಾಂಗ್ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ನಟ ವೈಜನಾಥ್‌ ಬಿರಾದಾರ್‌ ಪ್ರಧಾನ ಭೂಮಿಕೆಯಲ್ಲಿರುವ ‘90 ಹೊಡಿ ಮನೀಗ್ ನಡಿ’ ಚಿತ್ರದ ಎಣ್ಣೆ ಸಾಂಗ್‌ನ ಚಿತ್ರೀಕರಣ ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿ ಬಳಿ ನಡೆಯಿತು. ಅಂದಹಾಗೆ ಇದು ಬಿರಾದಾರ್‌ ನಟನೆಯ 500ನೇ ಸಿನಿಮಾವೂ ಹೌದು. ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದೆ.

ಹಾಡಿಗಾಗಿ ಅದ್ದೂರಿ ಸೆಟ್‌ ಅಳವಡಿಸಲಾಗಿತ್ತು. ಈ ಎಣ್ಣೆ ಹಾಡಿಗೆ ಬಿರಾದಾರ್ ಜೊತೆಗೆ ನಟ ಕರಿಸುಬ್ಬು, ಪ್ರಶಾಂತ್ ಸಿದ್ಧಿ, ಆರ್.ಡಿ. ಬಾಬು ಮತ್ತು ವಿವೇಕ್ ಜಂಬಗಿ ಹೆಜ್ಜೆ ಹಾಕಿದರು. ‘ಹೇ... ಒಲವಿನ ಚೆಲುವಿನ ಕುಡುಕರೆ ಕೇಳೀ... ಈ ಕವಿತೆಯು ಸಮರ್ಪಣೆ ನಿಮಗೆ...’ ಎಂದು ಶುರುವಾಗುವ ಈ ಹಾಡಿಗೆ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಈ ಹಾಡು ಬರೆದಿರುವುದು ವಿ. ನಾಗೇಂದ್ರಪ್ರಸಾದ್.

ಈ ಹಾಡಿನೊಂದಿಗೆ ಚಿತ್ರದ ಮುಕ್ಕಾಲು ಭಾಗದಷ್ಟು ಶೂಟಿಂಗ್‌ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಬಾಗಲಕೋಟೆಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

‘ಚುಟು ಚುಟು...’ ಹಾಡಿನ ಖ್ಯಾತಿಯ ಭೂಷಣ್ ಇದಕ್ಕೆ ನೃತ್ಯ ಸಂಯೋಜಿಸಿದ್ದಾರೆ. ಕಿರಣ್ ಶಂಕರ್ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣ ನಾಯ್ಕರ್ ಅವರ ಛಾಯಾಗ್ರಹಣವಿದೆ. ಇದನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಡಿ ಇದಕ್ಕೆ ಬಂಡವಾಳ ಹೂಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು