ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರು ಸಮಾಧಿ ಬಳಿ ಪತ್ನಿಗೆ 2ನೇ ಮಗುವಿನ ಸೀಮಂತ ನೆರವೇರಿಸಿದ ನಟ ಧ್ರುವ ಸರ್ಜಾ

ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Published 11 ಸೆಪ್ಟೆಂಬರ್ 2023, 12:41 IST
Last Updated 11 ಸೆಪ್ಟೆಂಬರ್ 2023, 12:41 IST
ಅಕ್ಷರ ಗಾತ್ರ

ಬೆಂಗಳೂರು: ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಾರ್ಟಿನ್ ಹಾಗೂ ಕೆ.ಡಿ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಅದರ ನಡುವೆಯೇ ಪತ್ನಿ ಪ್ರೇರಣಾ ಅವರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

ವಿಶೇಷವೆಂದರೆ, ಸರ್ಜಾ ಕುಟುಂಬದ ಸಂತೋಷದ ಕಾರ್ಯಕ್ರಮಗಳು ಸ್ಟಾರ್ ಹೋಟೆಲ್‌ಗಳಲ್ಲಿ ನೆರವೇರುತ್ತಿದ್ದವು. ಆದರೆ, ಎರಡನೇ ಮಗುವಿನ ಸೀಮಂತ ಕಾರ್ಯಕ್ರಮ ಧ್ರುವ ಅವರ ಅಣ್ಣ ಹಾಗೂ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಸಮಾಧಿ ಬಳಿ ನೆರವೇರಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಧ್ರುವ ಅಣ್ಣನ ಜೊತೆ ಹೊಂದಿದ್ದ ನಂಟನ್ನು ಕೊಂಡಾಡಿದ್ದಾರೆ.

ಕೃಷ್ಣ ಜನ್ಮಾಷ್ಠಮಿಯಂದು ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಕಾರ್ಯಕ್ರಮ ನೆರವೇರಿಸಲಾಗಿದೆ. ಇಲ್ಲಿಯೇ ಚಿರು ಸರ್ಜಾ ಅವರ ಸಮಾಧಿ ಇದೆ. ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದವರು ಆಪ್ತರು ಮಾತ್ರ ಹಾಜರಾಗಿದ್ದರು.

ಪ್ರೇರಣಾ ಶಂಕರ್ ಅವರನ್ನು ಪ್ರೇಮಿಸಿ ಧ್ರುವ ಸರ್ಜಾ 2019 ರಲ್ಲಿ ಮದುವೆಯಾಗಿದ್ದರು.

ಜೂನ್ 7, 2020 ರಂದು ಚಿರು ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಇನ್ನು ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT