ಶುಕ್ರವಾರ, ಮೇ 27, 2022
21 °C

ವಿದೇಶದಲ್ಲಿ ಗಾಳಿಪಟ ಹಾರಿಸಿದ ‘ಗಣಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಗಣೇಶ್

ಬೆಂಗಳೂರು: ಸದ್ಯ ಕಜಕಿಸ್ತಾನದಲ್ಲಿ ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ–2’ ಚಿತ್ರದ ಚಿತ್ರೀಕರಣದಲ್ಲಿ ತಲ್ಲೀನರಾಗಿರುವ ಗೋಲ್ಡನ್‌ ಸ್ಟಾರ್ ಗಣೇಶ್‌, ಬಿಡುವಿನಲ್ಲಿ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದಾರೆ. 

ವಿಶೇಷವೇನೆಂದರೆ, ಉತ್ಸವದಲ್ಲಿ ತಮ್ಮ ಮಗ ವಿಹಾನ್‌ ಫೋಟೊ ಇರುವ ಗಾಳಿಪಟವನ್ನು ಗಣೇಶ್‌ ಹಾರಿಸಿದ್ದಾರೆ. ಈ ಚಿತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಅವರು ಅಪ್‌ಲೋಡ್‌ ಮಾಡಿದ್ದಾರೆ.

ಚಿತ್ರೀಕರಣಕ್ಕಾಗಿ ಕಜಕಿಸ್ತಾನಕ್ಕೆ ಫೆಬ್ರುವರಿ ಮೂರನೇ ವಾರದಲ್ಲಿ ಚಿತ್ರತಂಡವು ತೆರಳಿದೆ. ಗಣೇಶ್‌, ನಟ ದಿಗಂತ್‌ ಹಾಗೂ ಪವನ್‌ ಜೊತೆಗಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ. ವಾರದ ಹಿಂದಷ್ಟೇ ಹಿಮಾವೃತವಾದ ರಸ್ತೆಯಲ್ಲಿ ಕಾರಿನಲ್ಲಿ ಸಾಗುವಾಗ ವಿಡಿಯೊವೊಂದನ್ನು ಗಣೇಶ್‌ ಮಾಡಿದ್ದರು. ಕಾರಿನಲ್ಲಿ ಮಲಗಿದ್ದ ದಿಗಂಗ್‌ ಅವರನ್ನು ‘ದೂದ್‌ ಪೇಡಾ’ ಎಂದು ಕರೆದು ಎಬ್ಬಿಸಿದ್ದರು. ಮೈಕೊರೆಯುವ ಚಳಿಯಲ್ಲಿ, ಹಿಮಾವೃತವಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ನಾಯಕಿಯರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು