ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಸಿದ್ಧಾರ್ಥ್–ನಟಿ ಅದಿತಿ ರಾವ್ ಹೈದರಿ ಎಂಗೇಜ್ಡ್: ವರದಿ

ನಟ, ನಿರ್ಮಾಪಕ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಅವರು ಎಂಗೇಜ್ಡ್ ಆಗಿದ್ದಾರೆ.
Published 27 ಮಾರ್ಚ್ 2024, 11:35 IST
Last Updated 27 ಮಾರ್ಚ್ 2024, 11:35 IST
ಅಕ್ಷರ ಗಾತ್ರ

ಬೆಂಗಳೂರು: ನಟ, ನಿರ್ಮಾಪಕ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಅವರು ಎಂಗೇಜ್ಡ್ ಆಗಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ಈ ಇಬ್ಬರೂ ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಿದ್ದು ಬಹಿರಂಗವಾಗಿತ್ತು.

ತೆಲುಗಿನ ‘ಮಂಗಳವಾರಂ’ ಖ್ಯಾತಿಯ ನಿರ್ದೇಶಕ ಅಜಯ್ ಭೂಪತಿ ನಿರ್ದೇಶಿಸಿದ್ದ ‘ಮಹಾಸಮುದ್ರಂ’ ಸಿನಿಮಾ ಮೂಲಕ ಸಿದ್ಧಾರ್ಥ್ ಹಾಗೂ ಅದಿತಿ ಸಂಪರ್ಕಕ್ಕೆ ಬಂದಿದ್ದರು.

ಖ್ಯಾತ ಮಾಡೆಲ್ ಆಗಿಯೂ ಗುರುತಿಸಿಕೊಂಡಿರುವ ಹೈದರಾಬಾದ್ ಮೂಲದ ಅದಿತಿ ರಾವ್ ಹೈದರಿ ಅವರು ಇದುವರೆಗೆ ಹಿಂದಿ, ತಮಿಳು, ತೆಲುಗಿನಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅದಿತಿ ಈ ಮೊದಲು ನಟ ಸತ್ಯದೀಪ್ ಮಿಶ್ರಾ ಎನ್ನುವರನ್ನು ಮದುವೆಯಾಗಿದ್ದರು. 2012ಕ್ಕೆ ವಿಚ್ಛೇದನ ಆಗಿತ್ತು. ಸಿದ್ಧಾರ್ಥ್ 2003ರಲ್ಲಿ ಮೇಘನಾ ಎನ್ನುವರನ್ನು ಮದುವೆಯಾಗಿದ್ದರು. 2007ರಲ್ಲಿ ಅವರಿಂದ ದೂರವಾಗಿದ್ದರು.

ನಿರ್ಮಾಪಕ, ನಿರ್ದೇಶಕ, ಹಿನ್ನೆಲೆ ಗಾಯಕ, ಕಥೆಗಾರ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಿದ್ಧಾರ್ಥ್ 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT