ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ನಟ ವೆಂಕಟೇಶ್ ಶೂಟಿಂಗ್‌ಗೆ ಗೈರು!

Last Updated 30 ಜುಲೈ 2020, 9:55 IST
ಅಕ್ಷರ ಗಾತ್ರ

ನಟ ವಿಕ್ಟರಿ ವೆಂಕಟೇಶ್ ಈ ವರ್ಷ ಅಂದರೆ 2020ರ ಅಂತ್ಯದವರೆಗೂ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲವಂತೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅನೇಕ ಸಿನಿಮಾ ನಟರು ಶೂಟಿಂಗ್‌ಗೆ ಮರಳುವ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಧಾರಾವಾಹಿ ಶೂಟಿಂಗ್‌ಗೆ ಅನುಮತಿ ಸಿಕ್ಕು ಶೂಟಿಂಗ್ ಆರಂಭವಾಗಿತ್ತು. ಆದರೆ ಅನೇಕ ನಟ–ನಟಿಯರಿಗೆ ಶೂಟಿಂಗ್‌ ಆರಂಭವಾದ ಮೇಲೆ ಕೊರೊನಾ ಪಾಸಿಟಿವ್ ಬಂದಿತ್ತು. ಆ ಕಾರಣಕ್ಕೆ ಈಗ ಸಿನಿಮಾ ನಟ–ನಟಿಯರು ಶೂಟಿಂಗ್‌ನಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ.

ಇದಕ್ಕೆ ನಟ ವೆಂಕಟೇಶ್ ಕೂಡ ಹೊರತಾಗಿಲ್ಲ. ಈ ವರ್ಷದ ಅಂತ್ಯದವರೆಗೂ ಶೂಟಿಂಗ್‌ನಲ್ಲಿ ಭಾಗವಹಿಸುವುದು ಅನುಮಾನ ಎನ್ನುತ್ತಿವೆ ಮೂಲಗಳು.ಅಲ್ಲದೇ ಸಂಕ್ರಾತಿಯ ನಂತರವಷ್ಟೇ ವೆಂಕಟೇಶ್ ಶೂಟಿಂಗ್‌ ಸ್ಥಳಕ್ಕೆ ಹೋಗಲಿದ್ದಾರಂತೆ.

ಕೊರೊನಾ ಸಂಪೂರ್ಣವಾಗಿ ದೂರವಾಗುವವರೆಗೂ ಶೂಟಿಂಗ್‌ನಲ್ಲಿ ಭಾಗವಹಿಸುವುದು ತರವಲ್ಲ ಎಂಬುದು ವೆಂಕಿ ಮಾಮನ ಯೋಚನೆ ಇರಬಹುದು.

ವೆಂಕಟೇಶ್ ಸದ್ಯ ತಮಿಳಿನ ‘ಅಸುರನ್’‌ ಸಿನಿಮಾ ರಿಮೇಕ್‌ ‘ನಾರಪ್ಪ’ದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಅನಿಲ್ ರವಿಪುಡಿ ನಿರ್ದೇಶನದ ‘ಎಫ್‌3’ ಸಿನಿಮಾದಲ್ಲೂ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT