ಬೆಂಗಳೂರು: ತೆಲುಗು ಜನಪ್ರಿಯ ನಟಿ ಆಮಣಿ ಅವರು ತೆಲಂಗಾಣ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಿನ್ನೆ ಹೈದರಾಬಾದ್ನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಟಿ ಬಿಜೆಪಿ ಸೇರಿದರು.

ಈ ಕುರಿತು ತೆಲಂಗಾಣ ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದೆ.

ಆಮಣಿ ಅವರು ಪಕ್ಷ ಸೇರ್ಪಡೆ ವೇಳೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ಪಕ್ಷದ ರಾಜ್ಯಾಧ್ಯಕ್ಷ ರಾಮಚಂದ್ರರಾವ್ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ. ಅವರ ಜೊತೆ ತೆಲುಗು ಚಿತ್ರರಂಗದ ಮೇಕಪ್ ಕಲಾವಿದೆ ಶೋಭಾ ಲತಾ ಅವರೂ ಬಿಜೆಪಿ ಸೇರಿದ್ದಾರೆ.

ಬೆಂಗಳೂರು ಮೂಲದ ತೆಲುಗು ಕುಟುಂಬದ ಹಿನ್ನೆಲೆ ಹೊಂದಿರುವ ಆಮಣಿ ಅವರು ತೆಲುಗು, ತಮಿಳು, ಕನ್ನಡದ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಶೇಷ ಎಂದರೆ ಕನ್ನಡದಲ್ಲಿ 1996 ರಲ್ಲಿ ತೆರೆಕಂಡಿದ್ದ ವಿಷ್ಣುವರ್ಧನ್ ಅವರ ಅಪ್ಪಾಜಿ ಸಿನಿಮಾದಲ್ಲಿ ನಾಯಕಿಯಾಗಿ ಅಮಣಿ ಮಿಂಚಿದ್ದರು. ಬಾಳಿನ ಜ್ಯೋತಿ ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಹೈದರಾಬಾದ್ನಲ್ಲಿದ್ದುಕೊಂಡು ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಹಾಗೂ ಧಾರಾವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.