ಶುಕ್ರವಾರ, ಫೆಬ್ರವರಿ 26, 2021
27 °C

ಚಾಲೆಂಜಿಂಗ್ ಪಾತ್ರ ನಿರೀಕ್ಷೆಯಲ್ಲಿ ಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಷಯ್‌ ಕುಮಾರ್‌ ಅವರೊಂದಿಗೆ ‘ಟಾಯ್ಲೆಟ್‌: ಏಕ್‌ ಪ್ರೇಮ್‌ ಕತಾ’ ಸಿನಿಮಾದಲ್ಲಿ ಪ್ರಬುದ್ಧ ನಟನೆಯಿಂದ ಗುರುತಿಸಿಕೊಂಡಿರುವ ಭೂಮಿ ಪಡ್ನೇಕರ್ ಈಗ ಸವಾಲಿನ ಪಾತ್ರದ ನಿರೀಕ್ಷೆಯಲ್ಲಿದ್ದಾರಂತೆ.

ಪ್ರಸ್ತುತ ಆರು ಸಿನಿಮಾಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಎಲ್ಲಾ ಸಿನಿಮಾಗಳು ಬಿಡುಗಡೆಯಾಗಲಿವೆ. ಮುಂದಿನ ದಿನಗಳಲ್ಲಿ ಸವಾಲಿನ ಪಾತ್ರಗಳ ಕಡೆ ಗಮನಕೊಡುವುದಾಗಿ ಅವರು ಹೇಳಿಕೊಂಡಿದ್ದಾರೆ.

2015ರಲ್ಲಿ ಅವರು ‘ದಮ್‌ ಲಗಾ ಕೆ ಐಸಾ’  ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ‘ಶುಭ್‌ ಮಂಗಲ್‌ ಸಾವದಾನ್‌’ ಚಿತ್ರದಲ್ಲಿ ನಟಿಸಿದ್ದಾರೆ. ‘ನಟಿಯಾಗಿ ನನ್ನ ಕೆಲಸ ಹೆಚ್ಚಿರಬೇಕು. ಪ್ರತಿ ಪಾತ್ರದಿಂದ ಹೊಸ ವಿಷಯ ಕಲಿಯುವಂತಿರಬೇಕು. ಮರೆಯಲಾಗದ ಪಾತ್ರ ಆಗಿರಬೇಕು’ ಎಂದು ನಟಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಟಾಯ್ಲೆಟ್‌’ ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಇದೆ. ಈ ರೀತಿಯ ಪಾತ್ರಗಳನ್ನು ಮಾಡಿದಾಗ ಸಿಗುವ ಖುಷಿಯೇ ಬೇರೆ’ ಎಂದಿದ್ದಾರೆ.‘ಸಾಂಡ್‌ ಕಿ ಆಂಖ್‌’ ಸಿನಿಮಾ ಶೂಟಿಂಗ್‌ ಮುಗಿಸಿದ್ದಾರೆ. ತಾಪ್ಸಿ ಪನ್ನು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು