ಶನಿವಾರ, ಜೂನ್ 6, 2020
27 °C

ಚಾಲೆಂಜಿಂಗ್ ಪಾತ್ರಕ್ಕೆ ಭೂಮಿಕಾ ಡಿಮಾಂಡ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಭೂಮಿಕಾ ಚಾವ್ಲಾ

ದುಂಡು ಮುಖದ, ಬಟ್ಟಲುಗಣ್ಣಿನ ಚೆಲುವೆ ಭೂಮಿಕಾ ಚಾವ್ಲಾ ಒಂದು ಕಾಲದಲ್ಲಿ ಬಹುಬೇಡಿಕೆ ನಟಿ‌. ತೆಲುಗಿನ ‘ಯುವಕುಡು’ ಸಿನಿಮಾದ ಮೂಲಕ ಸಿನಿರಂಗ ಪ್ರವೇಶಿಸಿದ ಈ ನಟಿ ತೆಲುಗಿನ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟಿಯಾಗಿರುವ ಈಕೆ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಭೋಜ್‌ಪುರಿ ಹಾಗೂ ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ತೆಲುಗಿನಲ್ಲಿ ಪವನ್‌ ಕಲ್ಯಾಣ್ ಜೊತೆ ‘ಖುಷಿ’ ಸಿನಿಮಾದಲ್ಲಿ, ಮಹೇಶ್‌ ಬಾಬು ಜೊತೆ ‘ಒಕ್ಕಡು’ ಹಾಗೂ ಎನ್‌ಟಿಆರ್ ಜೊತೆ ‘ಸಿಂಹಾದ್ರಿ’ ಸಿನಿಮಾದಲ್ಲಿ ನಟಿಸುವ ಮೂಲಕ ಭೂಮಿಕಾ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು.

ನಂತರ ದಕ್ಷಿಣ ಭಾರತದ ಸಿನಿರಂಗದಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದ್ದರೂ ಮದುವೆಯ ಕಾರಣದಿಂದ ಆಕೆ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದರು. ಈಗ ಮತ್ತೆ ನಟನೆಗೆ ಮರಳಿರುವ ಭೂಮಿಕಾ ಟಾಲಿವುಡ್‌ನಲ್ಲಿ ಬ್ಯುಸಿ. ಮದುವೆಯಾಗಿ ಕೆಲ ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿದ್ದರೂ ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸುವ ಆಸೆ ಇದೆ.

ನಾಯಕಿಯಾಗಿ ನಟಿಸುತ್ತಿದ್ದಾಗ ಅಷ್ಟೊಂದು ಚಾಲೆಂಜಿಂಗ್‌ ಪಾತ್ರಗಳು ಅವರಿಗೆ ಸಿಕ್ಕಿರಲಿಲ್ಲ. ಆ ಕಾರಣಕ್ಕೆ ಈಗ ಚಾಲೆಂಜ್‌ ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಅಲ್ಲದೇ ‘ಅಂದುದಾನ್’ ಸಿನಿಮಾದಲ್ಲಿ ತಬು ನಿರ್ವಹಿಸಿದಂತಹ ಪಾತ್ರ ಮಾಡಲು ಇಷ್ಟವಂತೆ.

ಈ ನಡುವೆ ಬೊಯಪತಿ ಶ್ರೀನು ನಿರ್ದೇಶನದ ಬಾಲಕೃಷ್ಣ ಅಭಿಯನದ ಮುಂದಿನ ಸಿನಿಮಾದಲ್ಲಿ ನೆಗೆಟಿವ್ ಪಾತ್ರವೊಂದರಲ್ಲಿ ನಟಿಸಲು ಭೂಮಿಕಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆಯಂತೆ. ನಟ ಬಾಲಕೃಷ್ಣರ ‘ರೂಲರ್’ ಸಿನಿಮಾದಲ್ಲೂ ಭೂಮಿಕಾ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದರು. ಈಗ ಭೂಮಿಕಾ ಅವರ ಆಶಯ ಹಾಗೂ ಆದ್ಯತೆಗಳನ್ನು ಆಧರಿಸಿ ಟಾಲಿವುಡ್‌ ಮುಂದೆ ಅವರಿಗೆ ಯಾವ ರೀತಿಯ ಪಾತ್ರಗಳನ್ನು ನೀಡಲಿದೆ ಎಂದು ಕಾದು ನೋಡಬೇಕಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.