ಶನಿವಾರ, ಸೆಪ್ಟೆಂಬರ್ 18, 2021
26 °C

ಬೆತ್ತಲಾಗಿ ಬಂದ ಗಹನಾ ವಶಿಷ್ಠ್‌: ಅಶ್ಲೀಲವೆಂದರೆ ಇದೇನಾ? –ಪ್ರಶ್ನಿಸಿದ ನಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ, ರೂಪದರ್ಶಿ ಗಹನಾ ವಶಿಷ್ಠ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬೆತ್ತಲೆಯಾಗಿ ವಿಡಿಯೊ ಹಂಚಿಕೊಳ್ಳುವ ಮೂಲಕ ಅಶ್ಲೀಲ ಎಂದರೆ ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ.

ನೀಲಿ ಚಿತ್ರ ನಿರ್ಮಾಣದ ಆರೋಪ ಎದುರಿಸುತ್ತಿರುವ ಗಹನಾ ವಶಿಷ್ಠ್‌ ಬೆತ್ತಲೆಯಾಗಿ ವಿಡಿಯೊ ಮಾಡುವ ಮೂಲಕ ಶೃಂಗಾರ (ಎರೋಅಟಿಕ) ಹಾಗೂ ಅಶ್ಲೀಲ ವಿಡಿಯೊಗಳಿಗೆ ವ್ಯತ್ಯಾಸ ಇದೆ ಎಂಬುದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

’ಈಗ ನಾನು ಬೆತ್ತಲಾಗಿ ನಿಮ್ಮ ಮುಂದೆ ಬಂದಿದ್ದೇನೆ, ನಿಮಗೆ ನನ್ನ ನೋಡಿದರೆ ಅಶ್ಲೀಲ ಎಂದು ಅನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ನಟಿಸಿರುವ ಎಲ್ಲಾ ವಿಡಿಯೊಗಳಲ್ಲಿ ಬಟ್ಟೆ ಇದೆ, ನಾನು ಶೃಂಗಾರದ ವಿಡಿಯೊಗಳನ್ನು ಮಾತ್ರ ಮಾಡಿರುವುದು, ಅಶ್ಲೀಲ ವಿಡಿಯೊಗಳನ್ನು ಅಲ್ಲ ಎಂದು ಹೇಳಿದ್ದಾರೆ. 

ಈಗಾಗಲೇ ಅಶ್ಲೀಲ ವಿಡಿಯೊ ನಿರ್ಮಾಣ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾರನ್ನು ಬಂಧಿಸಲಾಗಿದೆ. ರಾಜ್‌ ಕುಂದ್ರಾನನ್ನು ಬಂಧಿಸಿದಾಗ ಗಹಾನ ಅವರನ್ನು ಸಮರ್ಥನೆ ಮಾಡಿಕೊಂಡಿದ್ದರು.

ಗಹನಾ ಕಳೆದ ಪೆಬ್ರುವರಿಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ಎದುರಿಸಿ ಜೈಲಿಗೆ ಹೋಗಿ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು