ಸೋಮವಾರ, ಡಿಸೆಂಬರ್ 5, 2022
19 °C

ನಟಿ ಹನ್ಸಿಕಾ ಮದುವೆಯಾಗುತ್ತಿರುವ ವರ ಯಾರು ಎಂಬುದು ಬಹಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ 'ಬಿಂದಾಸ್' ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ವೈವಾಹಿಕ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ.

ಹನ್ಸಿಕಾ ಮದುವೆಯಾಗುತ್ತಿರುವ ವರ ಯಾರು ಎಂಬುದು ಇದೀಗ ಬಹಿರಂಗಗೊಂಡಿದೆ. ಮುಂಬೈ ಮೂಲದ ಜವಳಿ ಉದ್ಯಮಿ ಸೊಹೈಲ್ ಕಠೂರಿಯಾ ಅವರೊಂದಿಗೆ ಮದುವೆಯಾಗುವುದು ಖಾತ್ರಿಯಾಗಿದೆ.

ಹನ್ಸಿಕಾ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೊಹೈಲ್ ಕಠೂರಿಯಾ ಅವರು ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ಪ್ರೇಮ ನಿವೇದನೆ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

 

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ಬರೋಬ್ಬರಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಂದಿಗೂ ಬೇಡಿಕೆ ನಟಿಯಾಗಿರುವ ಹನ್ಸಿಕಾ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ವರನ ಬಗ್ಗೆ ಅವರು ಇದುವರೆಗೆ ಗುಟ್ಟು ಕಾಪಾಡಿಕೊಂಡಿದ್ದರು.

ರಾಜಸ್ಥಾನದ ಜೈ‍ಪುರದಲ್ಲಿರುವ ‘ಮುಂದೋಟಾ ಕೋಟೆ ಹಾಗೂ ಅರಮನೆ’ಯಲ್ಲಿ ಡಿಸೆಂಬರ್‌ನಲ್ಲಿ ಮದುವೆ ನಡೆಯಲಿದ್ದು, ಮದುವೆಗಾಗಿ ಸಿದ್ಧತೆಗಳು ಆರಂಭಗೊಂಡಿವೆ. ನಟಿ ಹನ್ಸಿಕಾ ಕೂಡ ಸಿದ್ದತೆಯ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ತಮಿಳು ನಟ ಸಿಂಬು ಜೊತೆ ಹನ್ಸಿಕಾ ಹೆಸರು ತಳುಕು ಹಾಕಿಕೊಂಡಿತ್ತು.

ಹೃತಿಕ್ ರೋಶನ್ ಅವರ ‘ಕೊಯಿ ಮಿಲ್ ಗಯಾ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಹನ್ಸಿಕಾ, ತೆಲುಗಿನ ‘ದೇಶಮುದುರು’ ಚಿತ್ರದ ಭರ್ಜರಿ ಓಪನಿಂಗ್ ನಂತರ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದರು. ಇದೀಗ ತಮಿಳು ಹಾಗೂ ಹಿಂದಿಯಲ್ಲಿ ಅವರ 5 ಚಿತ್ರಗಳು ಬಿಡುಗಡೆಯಾಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು