ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರು ಅಜ್ಜಿ ಲಕ್ಷ್ಮೀದೇವಿ ನಿಧನ: ಭಾವನಾತ್ಮಕ ಸಂದೇಶ ಹಂಚಿಕೊಂಡ ನಟಿ ಮೇಘನಾ ರಾಜ್

Last Updated 24 ಜುಲೈ 2022, 11:21 IST
ಅಕ್ಷರ ಗಾತ್ರ

ಬೆಂಗಳೂರು:ಕನ್ನಡದ ಖ್ಯಾತ ನಟರಾಗಿದ್ದ ಶಕ್ತಿಪ್ರಸಾದ್ ಪತ್ನಿ ಹಾಗೂ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ (84) ಶನಿವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಇತ್ತೀಚೆಗೆ ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.

ಲಕ್ಷ್ಮೀದೇವಿ ಅವರ ಮೊಮ್ಮಗ, ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್ ಲಕ್ಷ್ಮೀದೇವಿ ಅವರ ಬಗ್ಗೆ ಭಾವನಾತ್ಮಕ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಹಾ`ಕಿರುವ ಲಕ್ಷ್ಮೀದೇವಿ ಅವರನ್ನು ‘ಐರನ್ ಲೇಡಿ’ ಎಂದು ಗುಣಗಾನ ಮಾಡಿದ್ದಾರೆ. ‘ಅಜ್ಜಿ ನಿಮ್ಮ ನನ್ನ ಸಂಬಂಧ ಎಷ್ಟು ಸುಂದರವಾದದ್ದು, ನಾವು ಇಬ್ಬರೂ ಎಷ್ಟೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಚಿರು ಬಳಿ ನಾವಿಬ್ಬರೂ ಸೇರಿದಾಗ ಅವು ಯಾವುದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಚಿರು ಅಂತೂ ನಿಮ್ಮನ್ನು ‘ಡಾರ್ಲಿಂಗ್’ ಎಂದು ಕರೆಯುವುದು ನನಗೆ ತುಂಬಾ ಖುಷಿ ನೀಡುವಂತದ್ದಾಗಿತ್ತು. ನಾವು ನೀವು ಅದೆಷ್ಟು ಪ್ರೀತಿಯಿಂದ ಜಗಳವಾಡಿದ್ದೇವೆ, ಅದನ್ನು ಮರೆಯಲು ಸಾಧ್ಯವೇ? ನೀವು ಇಲ್ಲದೇ ನಮ್ಮ ಕುಟುಂಬದ ತಳಪಾಯವೇ ಅಲುಗಾಡಿದೆ.. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ..’ ಎಂದು ಮೇಘನಾ ರಾಜ್ ಲಕ್ಷ್ಮೀದೇವಿ ಅವರ ಬಗ್ಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಲಕ್ಷ್ಮೀದೇವಿ ಅವರು ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಪತ್ನಿ. ಲಕ್ಷ್ಮೀದೇವಿ ಮತ್ತು ಶಕ್ತಿ ಪ್ರಸಾದ್ ದಂಪತಿಗೆ ಮೂವರು ಮಕ್ಕಳು. ಒಬ್ಬರು ಪುತ್ರಿ, ಇಬ್ಬರು ಪುತ್ರರು ಇದ್ದರು. ಪುತ್ರರ ಪೈಕಿ ಕಿಶೋರ್ ಸರ್ಜಾ 2009ರಲ್ಲಿ ನಿಧನರಾಗಿದ್ದರು. ಮಗಳ ಮಕ್ಕಳಾದ ನಟ ಚಿರಂಜೀವಿ ಸರ್ಜಾ ಕಳೆದ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ ಹಾಗೂ ನಟ ದ್ರುವ ಸರ್ಜಾ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ಬಳಿಯಿರುವ ಜಕ್ಕೇನಹಳ್ಳಿಯಲ್ಲಿಲಕ್ಷ್ಮೀದೇವಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT