ಚೆನ್ನೈ: ದಕ್ಷಿಣ ಭಾರತದ ‘ಮಾದಕ ಚೆಲುವೆ‘ ಖ್ಯಾತಿಯ ನಟಿ ನಮಿತಾ 41ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಇದೇ ದಿನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಹೌದು, ನಮಿತಾ ತಾಯಿಯಾಗುತ್ತಿದ್ದಾರೆ. ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ನಮಿತಾ 41ನೇ ವಸಂತಕ್ಕೆ ಕಾಲಿಟ್ಟಿರುವುದಕ್ಕೆ ಸಿನಿಮಾರಂಗದ ದಿಗ್ಗಜರು, ಅಭಿಮಾನಿಗಳು ಶುಭಾಶಯ ಹೇಳುತ್ತಿದ್ದಾರೆ.

ವಿವಿಧ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿವಿಶೇಷ ಪ್ರಗ್ನೆನ್ಸಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೊಗಳು ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಭಿಮಾನಿಗಳು ಸೇರಿದಂತೆ ಆಪ್ತರು ನಮಿತಾಗೆ ಶುಭಾಶಯ ಕೋರುತ್ತಿದ್ದಾರೆ.

ನಮಿತಾ, ಕೆಲವೇ ಸಿನಿಮಾಗಳಲ್ಲಿ ಅಭಿನಯ ಮಾಡಿದರೂ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಕನ್ನಡದಲ್ಲಿ ರವಿಚಂದ್ರನ್ ಜೊತೆ, ನೀಲಕಂಠ, ಹೂ, ಇಂದ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಹಲವು ಹಾಡುಗಳಲ್ಲೂ ಅವರು ಹೆಜ್ಜೆ ಹಾಕಿದ್ದಾರೆ.

READ:ಅವತಾರ್–2 ಟ್ರೇಲರ್: ಹೇಗಿದೆ ದಿ ವೇ ಆಫ್ ವಾಟರ್ನಲ್ಲಿ ಜೇಮ್ಸ್ ಕರಾಮತ್ತು?

ಕನ್ನಡ, ತೆಲುಗು ಸಿನಿಮಾಗಳಿಗಿಂತ ತಮಿಳು ಚಿತ್ರಗಳಲ್ಲಿನಮಿತಾ ಹೆಚ್ಚು ನಟಿಸಿದ್ದಾರೆ. ಹಾಗೇ ಅವರು ತಮಿಳು ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ ನಮಿತಾ ವಿರೇಂದ್ರ ಅವರನ್ನು ಮದುವೆಯಾಗಿದ್ದಾರೆ.

READ:ಗಣೇಶ್ ನಟನೆಯ ‘ಗಾಳಿಪಟ–2’ ಸಿನಿಮಾ ಅಗಸ್ಟ್ 12ಕ್ಕೆ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.