ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘777’ ಎಂದು ಕೈ ಮೇಲೆ ಟ್ಯಾಟೂ ಹಾಕಿಸಿದ ನಟಿ ಪವಿತ್ರಾ ಗೌಡ: ಏನಿದರ ಮರ್ಮ?

Published 13 ಮಾರ್ಚ್ 2024, 13:33 IST
Last Updated 13 ಮಾರ್ಚ್ 2024, 13:33 IST
ಅಕ್ಷರ ಗಾತ್ರ

ಇತ್ತೀಚೆಗೆ ನಟ ದರ್ಶನ್‌ ತೂಗುದೀಪ ಜೊತೆಗಿನ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಭಾರಿ ಸುದ್ದಿಯಾಗಿದ್ದ ನಟಿ, ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ, ಇದೀಗ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಬಿಗ್‌ಬಾಸ್‌ ಖ್ಯಾತಿಯ ನೀತು ವನಜಾಕ್ಷಿ ಅವರ ಬಳಿ ಪವಿತ್ರಾ ಗೌಡ ಹಚ್ಚೆ ಹಾಕಿಸಿಕೊಂಡಿದ್ದು, 777 ಎಂದು ತಮ್ಮ ಕೈ ಮೇಲೆ ಹಚ್ಚೆ ಬರೆದುಕೊಂಡಿದ್ದಾರೆ. ಈ ಕುರಿತ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊ ನೋಡಿದ ನೆಟ್ಟಿಗರು ಹೆಚ್ಚೆಯ ಹಿಂದಿನ ರಹಸ್ಯವನ್ನು ಭೇದಿಸಲು ಪ್ರಯತ್ನಿಸಿದ್ದಾರೆ. ದರ್ಶನ್ ತೂಗುದೀಪ್‌ ಅವರು 1977ನೇ ಇಸವಿಯಲ್ಲಿ ಹುಟ್ಟಿದ್ದು, ಪವಿತ್ರಾ ಗೌಡ ಅವರ ಮಗಳು ನವೆಂಬರ್ 7ರಂದು ಜನಿಸಿದ್ದಾಳೆ. ಇವೆರಡನ್ನು ಒಟ್ಟುಗೂಡಿಸಿ ಹಚ್ಚೆ ಹಾಕಿಕೊಂಡಿದ್ದಾರೆ ಎಂದಿದ್ದಾರೆ.

ಆದರೆ ಈ ಬಗ್ಗೆ ಪವಿತ್ರಾ ಗೌಡ ಇದುವರೆಗೆ ಪ್ರತಿಕ್ರಿಯಿಸಿಲ್ಲ.

ಬೀದಿಗೆ ಬಂದಿದ್ದ ದರ್ಶನ್ ಪತ್ನಿ–ಪವಿತ್ರಾ ಗೌಡ ಜಗಳ

‘ನಟ ದರ್ಶನ್‌ ಅವರೊಂದಿಗಿನ ಸಂಬಂಧಕ್ಕೆ 10 ವರ್ಷ’ ಎಂದು ಪವಿತ್ರಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಪವಿತ್ರಾ ಗೌಡ ಅವರ ಮಗಳು ಮತ್ತು ಗಂಡನ ಫೋಟೊಗಳನ್ನು ಹಂಚಿಕೊಂಡು ‘ಇದು ಇವರ ನೈಜ ಮುಖ’ ಎಂದು ಪೋಸ್ಟ್‌ ಮಾಡಿದ್ದರು.

ಖಾಸಗಿ ಫೋಟೊಗಳನ್ನು ಹಂಚಿಕೊಂಡಿದ್ದಕ್ಕೆ ಸಿಟ್ಟಿಗೆದ್ದಿದ್ದ ಪವಿತ್ರಾ ಗೌಡ, ವಿಜಯಲಕ್ಷ್ಮಿ ಅವರಿಗೆ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಈ ಬಗ್ಗೆ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT