ಬುಧವಾರ, ಜನವರಿ 19, 2022
18 °C

ಹಾಟ್‌ ವಿಡಿಯೊ ಹಂಚಿಕೊಂಡು ಡಿಲೀಟ್‌ ಮಾಡಿದ ನಟಿ ಪಾಯಲ್‌ ರಜಪೂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪಂಜಾಬಿ ನಟಿ ಪಾಯಲ್‌ ರಜಪೂತ್‌ ಹಾಟ್‌ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೆಲ ಸಮಯದ ಬಳಿಕ ಡಿಲೀಟ್‌ ಮಾಡಿದ್ದಾರೆ.

 ಸಿನಿಮಾ ಮತ್ತು ಫೋಟೊಶೂಟ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಪಾಯಲ್‌ ಹಳದಿ ಬಣ್ಣದ ಉಡುಗೆ ತೊಟ್ಟು ಫೋಟೊಶೂಟ್‌ ಮಾಡಿಸಿದ್ದರು. ಇದರಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದರು. 

ವಿಡಿಯೊ ಹಂಚಿಕೊಂಡ ಕೆಲ ಕ್ಷಣಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆದರೆ ಕುಟುಂಬದವರು ಮತ್ತು ಆಪ್ತರು ಆ ವಿಡಿಯೊಗೆ ವಿರೋಧ ವ್ಯಕ್ತಪಡಿಸಿದ್ದರು. ಕೆಲ ಗಂಟೆಗಳ ಬಳಿಕ ತಮ್ಮ ಖಾತೆಯಿಂದ ಅದನ್ನು ಡಿಲೀಟ್‌ ಮಾಡಿದ್ದರು.

ಆ ವಿಡಿಯೊ ಬಹುಮಾಧ್ಯಮಗಳಲ್ಲಿ ಹೆಚ್ಚು ಶೇರ್‌ ಆದ ಪರಿಣಾಮ ಅದು ಈಗಾಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ಬಗ್ಗೆ ಪಾಯಲ್‌ ಸಾಮಾಜಿಕ ಮಾಧ್ಯಮಗಳ ಮೂಲಕ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಸದ್ಯ ಪಾಯಲ್‌ ಅವರು ನಟ ಡಾಲಿ ಧನಂಜಯ ಅಭಿನಯದ ಹೆಡ್‌ ಬುಶ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು