ಭಾನುವಾರ, ಮಾರ್ಚ್ 26, 2023
31 °C

ನಟಿ ಸಾರಾ ಅದೃಷ್ಟಕ್ಕೆ ಬಿ–ಟೌನ್‌ ಅಚ್ಚರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಸಾರಾ ಅಲಿಖಾನ್‌ ಕಳೆದ ವರ್ಷ ‘ಕೇದಾರನಾಥ’ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದವರು. ಈ ಚಿತ್ರವನ್ನು ನಿರ್ದೇಶನ ಮಾಡಿದವರು ಅಭಿಷೇಕ್‌ ಕಪೂರ್‌. ಬಳಿಕ ರೋಹಿತ್‌ ಶೆಟ್ಟಿಯ ‘ಸಿಂಬಾ’ ಚಿತ್ರದಲ್ಲಿ ನಟಿಸಿದರು. ಈಗ ಇಮ್ತಿಯಾಜ್‌ ಆಲಿ  ಅವರ ‘ಲವ್‌ ಆಜ್‌ ಕಲ್‌ 2’ ಹಾಗೂ ಡೇವಿಡ್‌ ಧವನ್‌ರ ‘ಕೂಲಿ ನಂ.1’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕಡಿಮೆ ಸಮಯದಲ್ಲಿ ಪ್ರಸಿದ್ಧ ನಿರ್ದೇಶಕರ ಚಿತ್ರಗಳಲ್ಲಿಯೇ ನಟಿಸುವ ಅವಕಾಶ ಪಡೆದ ಸಾರಾ ಬಗ್ಗೆ ಬಿ–ಟೌನ್‌ ಅಚ್ಚರಿ ವ್ಯಕ್ತಪಡಿಸಿದೆ. ಸ್ವತಃ ಸಾರಾ ಅಲಿಖಾನ್‌ ತನ್ನನ್ನು ಚಿತ್ರಗಳಿಗೆ ಆಯ್ಕೆ ಮಾಡಿದ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ.

‘ಎಲ್ಲರಿಗೂ ಧನ್ಯವಾದ. ನನಗೆ ನನ್ನನ್ನು ಬಹುಮುಖ ಪ್ರತಿಭೆ ಎಂದು ಗುರುತಿಸಿಕೊಳ್ಳಲು ಇಷ್ಟ. ಇದಕ್ಕಾಗಿ ನಾನು ವಿಭಿನ್ನ ಪಾತ್ರಗಳ ಸಿನಿಮಾಗಳನ್ನು ಎದುರು ನೋಡುತ್ತೇನೆ.  ಹಾಡು, ನೃತ್ಯಗಳಿರುವ ಕಮರ್ಷಿಯಲ್‌ ಸಿನಿಮಾಗಳಲ್ಲಿ ಅಭಿನಯಿಸಲು ನನಗಿಷ್ಟ. ಅದೇ ವೇಳೆ ನಟನೆಗೆ ಅವಕಾಶವಿರುವ ಸಿನಿಮಾಗಳಲ್ಲೂ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಇದೇ ಕಾರಣಕ್ಕಾಗಿ ನಾನು ವಿಭಿನ್ನ ಪಾತ್ರಗಳ ‘ಸಿಂಬಾ’, ‘ಕೂಲಿ ನಂ.1’, ‘ಕೇದಾರನಾಥ’ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡೆ. ಆದರೆ ಈ ಎಲ್ಲಾ ಸಿನಿಮಾಗಳಿಗೂ ನಿರ್ದೇಶಕರೇ ನನ್ನನ್ನು ಆಯ್ಕೆ ಮಾಡಿರುವುದು. ಇಂತಹ ಜನಪ್ರಿಯ ನಿರ್ದೇಶಕರ ಜೊತೆ ಕೆಲಸ ಮಾಡಿರುವುದು ನಟನೆಯ ಜೊತೆ ಉತ್ತಮ ಕಲಿಕೆಯ ಅನುಭವ ನೀಡಿತು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು