ಒಂದು ತಕರಾರಿನ ಜತೆಗೇ ಮಾತಿಗೆ ಆರಂಭಿಸಿದರು ‘ಆದಿ ಪುರಾಣ’ ಚಿತ್ರದ ನಿರ್ದೇಶಕ ಮೋಹನ್ ಕಾಮಾಕ್ಷಿ. ‘ಸಣ್ಣ ಪುಟ್ಟ ಕಾರಣಗಳಿಗೂ ಯಾವುದೇ ಚರ್ಚೆಗೆ ಆಸ್ಪದ ಇಲ್ಲದಂತೆ ಕತ್ತರಿಸಲು ಹೇಳುತ್ತಾರೆ. ಇಲ್ಲವೇ ಎ ಪ್ರಮಾಣಪತ್ರ ಕೊಡುತ್ತೇವೆ ಎನ್ನುತ್ತಾರೆ. ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಸಾಕಷ್ಟು ತೊಂದರೆ ಆಗುತ್ತಿದೆ’ ಎಂದು ಬೇಸರದಿಂದಲೇ ಹೇಳಿಕೊಂಡರು.

‘ಆದಿ ಪುರಾಣ’ವನ್ನು ನೋಡಿದ ಸೆನ್ಸಾರ್ ಮಂಡಳಿ 65 ಕಟ್‌ಗಳನ್ನು ಹೇಳಿದೆಯಂತೆ. ‘ಸಂಭಾಷಣೆಗಳನ್ನು ಮ್ಯೂಟ್ ಮಾಡುತ್ತೇವೆ. ಯು/ಎ ಪ್ರಮಾಣಪತ್ರ ಕೊಡಿ ಎಂದು ನಾವು ಕೇಳಿಕೊಂಡೆವು. ಆದರೆ ಅದಕ್ಕೂ ಒಪ್ಪಿಕೊಂಡಿಲ್ಲ’ ಎಂದರು ಮೋಹನ್. ಈಗ ಅವರು ತಮ್ಮ ಚಿತ್ರವನ್ನು ಎ ಪ್ರಮಾಣ ಪತ್ರ ಇಟ್ಟುಕೊಂಡೇ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಆದಿ ಪುರಾಣ ಚಿತ್ರವನ್ನು ಅಕ್ಟೋಬರ್ 5ಕ್ಕೆ ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅದು ಎರಡನೇ ಟ್ರೇಲರ್ ಅನ್ನೂ ಬಿಡುಗಡೆ ಮಾಡಿದೆ. ಮುಂದಿನ ವಾರದಿಂದ ವಿಡಿಯೊ ಹಾಡುಗಳನ್ನೂ ಬಿಡುಗಡೆ ಮಾಡಿ ಚಿತ್ರದ ಪ್ರಚಾರ ಕೈಗೊಳ್ಳುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದಾರೆ.

ಗಾಂಧಿ ಜಯಂತಿ ದಿನದಂದು ಬೆಂಗಳೂರಿನ ಗಾಂಧಿನಗರದ ಚಿತ್ರಮಂದಿರದಲ್ಲಿ ಉಚಿತ ಪ್ರದರ್ಶನ ಏರ್ಪಡಿಸಲೂ ತಂಡ ನಿರ್ಧರಿಸಿದೆ.

‘70 ಚಿತ್ರಮಂದಿರಳಲ್ಲಿ ಆದಿಪುರಾಣ ಬಿಡುಗಡೆ ಆಗಲಿದೆ’ ಎಂದು ಶಮಂತ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರ ತಮ್ಮ ಶಶಾಂಕ್ ಅವರೇ ಈ ಚಿತ್ರದ ನಾಯಕ. ‘ಮೊದಲ ಬಾರಿ ನಾಯಕನಾಗಿ ನಟಿಸಿದ್ದೇನೆ. ಇಬ್ಬರು ನಾಯಕಿಯರೊಂದಿಗೆ ಚುಂಬನ ದೃಶ್ಯದಲ್ಲಿ ಭಾಗವಹಿಸಿದ್ದು ಕಷ್ಟದ ಕೆಲಸವಾಗಿತ್ತು. ಜೀವನದಲ್ಲಿ ಇದೇ ಮೊದಲ ಬಾರಿಗೆ ಹುಡುಗಿಯರಿಗೆ ಚುಂಬಿಸಿದ್ದು’ ಎಂದರು. ಈ ದೃಶ್ಯಕ್ಕೆ ಅವರು ಐದು ಟೇಕ್‌ಗಳನ್ನು ಪಡೆದುಕೊಂಡಿದ್ದಾರಂತೆ.

ಅಹಲ್ಯಾ ಸುರೇಶ್ ಮತ್ತು ಮೋಕ್ಷಾ ಕುಶಾಲ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.