ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ದೇವರಾಜ್ ಜೊತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ ಅದಿತಿ ಪ್ರಭುದೇವ

Last Updated 9 ಫೆಬ್ರವರಿ 2021, 11:25 IST
ಅಕ್ಷರ ಗಾತ್ರ

ಚಂದನವನದ ಬೆಡಗಿ ಅದಿತಿ ಪ್ರಭುದೇವ ಕೈಯಲ್ಲೀಗ ಸಿನಿಮಾಗಳ ಸುಗ್ಗಿ. ಈಕೆ ನಟಿಸುತ್ತಿರುವ 10ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ. ಸದ್ಯ ಮೈಸೂರಿನಲ್ಲಿರುವ ಈ ಬೆಡಗಿ ತೋತಾಪುರಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತೋತಾಪುರಿ ಸಿನಿಮಾದಲ್ಲಿ ಜಗ್ಗೇಶ್‌, ಸುಮನ್ ರಂಗನಾಥ್‌, ಡಾಲಿ ಧನಂಜಯ್‌, ದತ್ತಣ್ಣ ಮೊದಲಾದವರು ನಟಿಸುತ್ತಿದ್ದಾರೆ.

ಈ ನಡುವೆ ಆಕೆ ನಟ ಪ್ರಜ್ವಲ್‌ ದೇವರಾಜ್ ಜೊತೆ ಹೊಸ ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರಂತೆ. ಪ್ರಜ್ವಲ್ ಹಾಗೂ ಅದಿತಿ ನಟನೆಯ ಸಿನಿಮಾಕ್ಕೆ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರದಲ್ಲಿ ನಟ ದೇವರಾಜ್ ಕೂಡ ನಟಿಸುತ್ತಿದ್ದಾರೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

‘ಈ ಸಿನಿಮಾವು ಕುತೂಹಲಕಾರಿ ಕಥೆಯನ್ನು ಹೊಂದಿದೆ. ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾದಲ್ಲಿ ಒಂದು ಅದ್ಭುತ ಸ್ಟೋರಿಲೈನ್ ಕೂಡ ಇದೆ. ನಾನು ಮಧ್ಯಮ ವರ್ಗದ ಶಿಕ್ಷಕರರೊಬ್ಬರ ಮಗಳ ಪಾತ್ರ ನಿರ್ವಹಿಸುತ್ತಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ ಅದಿತಿ.

ವಿನಯ್ ರಾಜಕುಮಾರ್ ನಟನೆಯ ‘ಅದೊಂದಿತ್ತು ಕಾಲ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಅದಿತಿ. ಈ ಚಿತ್ರದ ಶೂಟಿಂಗ್ ಆರಂಭವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT