ಭಯೋತ್ಪಾದನೆ ಮತ್ತು ಪಾಕಿಸ್ತಾನ ಸೇನೆಯ ವಿರುದ್ಧ ಗಾಯಕಅದ್ನಾನ್ ಸಮಿ ಮತ್ತೊಮ್ಮೆ ಗುಡುಗಿದ್ದಾರೆ. ‘ಅಸಹಾಯಕ, ದಾರಿ ತಪ್ಪಿದ ಮತ್ತು ಖಿನ್ನತೆಗೆ ಒಳಗಾದ ಸೇನೆ‘ ಎಂದುಪಾಕಿಸ್ತಾನ ಸೇನೆಯ ವಿರುದ್ಧ ಇತ್ತೀಚೆಗೆ ಕಿಡಿ ಕಾರಿ ಸುದ್ದಿಯಾಗಿದ್ದರು.

‘ಪಾಕ್ ಸೇನೆಯನ್ನು ನಾನು ದ್ವೇಷಿಸುತ್ತೇನೆ. ಏಕೆಂದರೆ ಅದು ಸದಾ ಯುದ್ಧೋತ್ಸಾಹಿ ಮತ್ತು ರಕ್ತಪಿಪಾಸು. ಅಲ್ಲಿಯ ಸೇನೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು, ನಾಗರಿಕರ ಮನಃಸ್ಥಿತಿಯನ್ನೂ ಬದಲಿಸಿದೆ’ ಎಂದು ಸಮಿ ಹರಿಹಾಯ್ದಿದ್ದರು. ‘ಆದರೆ, ನಾನು ಪಾಕಿಸ್ತಾನ ನಾಗರಿಕರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಅವರು ಕೂಡ ಅಷ್ಟೇ. ನನ್ನ ಮೇಲೆ ಪ್ರಾಣ ಇಟ್ಟುಕೊಂಡಿದ್ದಾರೆ’ ಎಂದು ಹೇಳಿದ್ದಾರೆ. ಬ್ರಿಟನ್ನಲ್ಲಿ ಹುಟ್ಟಿದ ಪಾಕಿಸ್ತಾನ ಮೂಲದ ಅದ್ನಾನ್ ಸಮಿ ಕೆನಡಾದ ಪೌರತ್ವ ಹೊಂದಿದ್ದರು. 2016ರಲ್ಲಿ ಭಾರತದ ಪೌರತ್ವ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.