ಸೋಮವಾರ, ಏಪ್ರಿಲ್ 19, 2021
32 °C

ಶೀಘ್ರ ಕಿರುತೆರೆಯಲ್ಲಿ ಕೆಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೌನ್‌ ಬನೇಗಾ ಕರೋಡ್‌ಪತಿಯ 11 ಆವೃತ್ತಿಗೆ ಸಿದ್ಧತೆ ಶುರುವಾಗಿದೆ. ಅಮಿತಾಭ್‌ ಬಚ್ಚನ್‌ ಅವರ ಪ್ರೊಮೊ ಶೂಟ್‌ ಈಗಾಗಲೇ ಮುಗಿದಿದೆ. ಈ ಸರಣಿಯನ್ನು ಬಿಗ್‌ ಬಿ ನಡೆಸಿಕೊಡಲಿದ್ದಾರೆ. 

ತಮ್ಮ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ಲಖನೌದಲ್ಲಿ ಅಮಿತಾಭ್‌ ಬಚ್ಚನ್ ಇದ್ದುದರಿಂದ ಈ ಷೋ ತಂಡ ಅಲ್ಲಿಗೆ ತೆರಳಿ ಪ್ರೋಮೊ ಚಿತ್ರೀಕರಣ ಮಾಡಿದ್ದಾರೆ. ಇದರ ಫಸ್ಟ್‌ಲುಕ್‌ ಅನ್ನು ಅಮಿತಾಭ್‌ ಬಚ್ಚನ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ಕೆಲಸ ಮುಗಿದಾಗ ಮತ್ತೊಂದು ಕೆಲಸದತ್ತ ಹೊರಳಲೇಬೇಕು.. ಕೆಬಿಸಿ ಪ್ರೊಮೊ.. ಎಲ್ಲಾ ಸರಿಹೋದರೆ ಆಗಸ್ಟ್‌ ಮೊದಲ ವಾರದಲ್ಲಿ ಶೋ ಆರಂಭ’ ಎಂದು ಬರೆದುಕೊಂಡಿದ್ದಾರೆ. 

‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ರಾಜಕೀಯ, ಇತಿಹಾಸ, ವಿಜ್ಞಾನ, ಚಿತ್ರರಂಗ ಹೀಗೆ ಎಲ್ಲಾ ಕ್ಷೇತ್ರದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಲ್ಲಿ ಕೇಳುವ ಪ್ರಶ್ನೆಗಳು ಮುಂದಿನ ಯಾವುದೇ ಸಂಚಿಕೆಯಲ್ಲಿ ಪುನರಾವರ್ತನೆಯಾಗುವುದಿಲ್ಲ. ಇದು ಈ ಶೋದ ವಿಶೇಷತೆ. ಈ ಅಂಶವೇ ಈ ಶೋಗೆ ಖ್ಯಾತಿಯನ್ನು ತಂದುಕೊಟ್ಟಿದೆ ಎನ್ನಬಹುದು. 

ಮಾರ್ಚ್‌ ತಿಂಗಳಲ್ಲಿ ‘ಕೌನ್‌ ಬನೇಗಾ ಕರೋಡ್‌ಪತಿ’ ಮುಂದಿನ ಸೀಸನ್‌ಗೆ ತಯಾರಿ ನಡೆಸುತ್ತಿದ್ದೇನೆ ಎಂದು ಬಿಗ್‌ಬಿ ತನ್ನ ಅಭಿಮಾನಿಗಳಿಗೆ ತಿಳಿಸಿದ್ದರು. ಕಳೆದ 9 ಆವೃತ್ತಿಗಳಲ್ಲಿ ಅಮಿತಾಭ್‌ ಅವರೇ ಈ ಕಾರ್ಯಕ್ರಮ ನಿರೂಪಿಸುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು