ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಗೆ ಹೋದ ‘ಐಹೊಳೆ’

Last Updated 9 ನವೆಂಬರ್ 2022, 11:44 IST
ಅಕ್ಷರ ಗಾತ್ರ

ಚಾಲುಕ್ಯರ ರಾಜಧಾನಿ ಐಹೊಳೆಯ ಮಹತ್ವ ಸಾರುವ ಈ ಮೂಲಕ ನಾಡಿನ ಸಂಸ್ಕೃತಿ ಹಾಗೂ ಇತಿಹಾಸವನ್ನು ಸಾರುವ ‘ಐಹೊಳೆ’ ಚಿತ್ರ ಪ್ರತಿಷ್ಠಿತ ಅಯೋಧ್ಯೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ನವೆಂಬರ್ 10, 11ರಂದು ನಡೆಯುವ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಚಾಲುಕ್ಯರ ರಾಜಧಾನಿ ಐಹೊಳೆ ಅಂತರರಾಷ್ಟ್ರೀಯ ಪ್ರವಾಸಿ ತಾಣ. ಈ ತಾಣದ ಇತಿಹಾಸವನ್ನು ಮಕ್ಕಳ ಚಿತ್ರದ ಮೂಲಕ ಸಾರುವ ಪ್ರಯತ್ನವನ್ನು ಚಿತ್ರದ ನಿರ್ದೇಶಕ ರವೀಂದ್ರನಾಥ ಸಿರವಾರ ಮಾಡಿದ್ದಾರೆ‌.

ಈ ಚಿತ್ರ ಸಂಪೂರ್ಣ ಐಹೊಳೆಯಲ್ಲಿಯೇ ಚಿತ್ರೀಕರಣಗೊಂಡಿದೆ. ಸಿರಿವರ ಕ್ರಿಯೇಷನ್ ನಿರ್ಮಿಸಿರುವ ಈ ಚಿತ್ರಕ್ಕೆ ನಾದಬ್ರಹ್ಮ ಡಾ. ಹಂಸಲೇಖ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ರವೀಂದ್ರನಾಥ ಸಿರಿವರ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪತ್ರಕರ್ತ ಶಂಕರ ಪಾಗೋಜಿ ಸಂಭಾಷಣೆ ಇದೆ.

ತಾರಾಗಣದಲ್ಲಿ ನಾಯಕ ರೇವಂತ್, ನಾಯಕಿ ಪ್ರಗತಿ, ವೈಜನಾಥ ಬಿರಾದಾರ್, ಶ್ರೀಧರ್, ಅರ್ಚನಾ ಪ್ರಮುಖ ಪಾತ್ರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT