ಶನಿವಾರ, ಮಾರ್ಚ್ 25, 2023
28 °C

₹260 ಕೋಟಿ ಖಾಸಗಿ ಜೆಟ್‌: ಸ್ಪಷ್ಟನೆ ನೀಡಿದ ನಟ ಅಕ್ಷಯ್‌ ಕುಮಾರ್‌

ಪ್ರಜಾವಾಣಿ ವೆಬ್ ಡೆ‌ಸ್ಕ್ Updated:

ಅಕ್ಷರ ಗಾತ್ರ : | |

ತಮ್ಮ ಬಳಿ ₹260 ಕೋಟಿ ಮೌಲ್ಯದ ಖಾಸಗಿ ಜೆಟ್‌ ಇದೆ ಎಂಬ ಸುದ್ದಿ ಆಧಾರ ರಹಿತವಾಗಿದೆ ಎಂದು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅಕ್ಷಯ್‌ ಕುಮಾರ್‌ ‘ಸುಳ್ಳು, ಸುಳ್ಳು...ಪ್ಯಾಂಟ್‌ನಲ್ಲಿ ಉರಿ. ಬಾಲ್ಯದಲ್ಲಿ ಈ ಮಾತನ್ನು ಕೇಳಿದ್ದೀರಾ? ಕೆಲವು ವ್ಯಕ್ತಿಗಳು ಸ್ಪಷ್ಟವಾಗಿ ಬೆಳೆದಿಲ್ಲ. ಅವರೊಂದಿಗೆ ಕಾದಾಡುವ ಮನಸ್ಥಿತಿಯಲ್ಲಿ ಇಲ್ಲ. ನನ್ನ ಕುರಿತು ಆಧಾರ ರಹಿತವಾಗಿ ಬರೆಯುವವರಿಗೆ ಮೇಲಿನ ವಾಕ್ಯ ಸೂಕ್ತವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಗರಿಷ್ಠ ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್‌ ಕುಮಾರ್‌ ಕೂಡ ಒಬ್ಬರು. ವರ್ಷಕ್ಕೆ 4 ರಿಂದ 5 ಸಿನಿಮಾಗಳಲ್ಲಿ ನಟಿಸುತ್ತಾರೆ. ಅವರ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತವೆ.

ಅಕ್ಷಯ್‌ ಕುಮಾರ್‌ ಬಳಿ ದುಬಾರಿ ವಸ್ತುಗಳಿವೆ. ಖಾಸಗಿ ಜೆಟ್‌ ಇದೆ ಎಂಬಿತ್ಯಾದಿ ಸುದ್ದಿಗಳು ಆಗೀಗ ಹರಿದಾಡುತ್ತಲೇ ಇದ್ದವು. ಯಾವುದಕ್ಕೂ ಪ್ರತಿಕ್ರಿಯಿಸದೆ ಸುಮ್ಮನಿದ್ದ ಅಕ್ಷಯ್‌ ಕುಮಾರ್‌, ವೈರಲ್‌ ಆದ ತಮ್ಮ ಜೆಟ್‌ ಜೊತೆಗಿನ ಚಿತ್ರದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.

ಈ ಟ್ವೀಟ್‌ಗೆ ಹಲವಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ‘ಬಹಳ ಕಾಲದ ನಂತರ ನಿಮ್ಮನ್ನು ಆಕ್ರಮಣಕಾರಿ ಮನಸ್ಥಿತಿಯಲ್ಲಿ ನೋಡಲು ಖುಷಿಯಾಗುತ್ತಿದೆ’ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಜನ ಇಂಥ ವಿಷಯಗಳಿಗೆ ಗಮನ ಕೊಡದೆ ‘ರಾಮಸೇತು’ ಚಿತ್ರದ ಕಡೆ ಹೆಚ್ಚು ಗಮನ ಹರಿಸಿ ಎಂಬುದಾಗಿ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು