ಸೋಮವಾರ, ಸೆಪ್ಟೆಂಬರ್ 16, 2019
22 °C

ಆಲಿಯಾಗೆ ಹೊಸ ಫ್ಯಾನ್‌!

Published:
Updated:
Prajavani

ಮುದ್ದು ಮುಖದ ಚೆಲುವೆ ಆಲಿಯಾ ಭಟ್‌ ಸೌಂದರ್ಯವಷ್ಟೇ ಅಲ್ಲ ನಟನೆಯ ಮೂಲಕವೂ ಅಭಿಮಾನಿಗಳನ್ನು ಗಳಿಸಿಕೊಂಡವರು. ಈಚೆಗೆ ಆಲಿಯಾಗೆ ಒಬ್ಬ ಹೊಸ ಫ್ಯಾನ್ (ಅಭಿಮಾನಿ) ಸಿಕ್ಕಿದ್ದಾರೆ.  ಯಾರು ಅಂತೀರಾ? ‘ಸ್ಟೂಡೆಂಟ್ಸ್‌ ಆಫ್ ದಿ ಇಯರ್ ಭಾಗ–2’ ನಿರ್ದೇಶಕ ಪುನೀತ್ ಮಲ್ಹೋತ್ರ, ಆಲಿಯಾ ಹೊಸ ಅಭಿಮಾನಿ.   

2012ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ತೆರೆಕಂಡಾಗಲೇ ನಾನು ಆಲಿಯಾ ಅಭಿಮಾನಿಯಾಗಿದ್ದೆ. ಈಗ ಭಾಗ–2ರಲ್ಲಿ ಅವಳ ಪಾತ್ರ ನಿರ್ದೇಶಿಸುವಾಗ ಆ ಪಾತ್ರದ ಕುರಿತು ಆಲಿಯಾಗಿರುವ ತನ್ಮಯತೆ, ಅವಳ ವೃತ್ತಪರತೆ ಕಂಡು ನಾನು ಅವಳ ಅಭಿಯಾನಿಯಾಗಿದ್ದೇನೆ ಎಂದು ಪುನೀತ್ ಮಲ್ಹೋತ್ರ ಹೇಳಿಕೊಂಡಿದ್ದಾರೆ. 

ಸ್ಟೂಡೆಂಟ್ ಆಫ್ ದಿ ಇಯರ್ ಭಾಗ–2ರಲ್ಲಿ ಆಲಿಯಾ ಜತೆಗೆ ಟೈಗರ್ ಶ್ರಾಫ್, ಅನನ್ಯಾ ಪಾಂಡೆ, ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಈಚೆಗಷ್ಟೇ ಈ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದವು. ಇದೀಗ ಚಿತ್ರದ ಮೂರನೇ ಹಾಡು ’ಹುಕ್ ಅಪ್’ ಬಿಡುಗಡೆಯಾಗಿದ್ದು, ಇದರಲ್ಲಿ ಆಲಿಯಾ ಮಾದಕವಾಗಿ ಕಾಣಿಸಿಕೊಂಡಿದ್ದಾರಂತೆ. ಮುಗ್ಧತೆಯಿಂದ ಸೆಕ್ಸಿ ಲುಕ್‌ವರೆಗೆ ಆಲಿಯಾ ಶಿಫ್ಟ್ ಆಗುವ ರೀತಿ ಬೆರಗುಗೊಳಿಸುವಂಥದ್ದು. ಈ ಹಾಡು ಅದ್ಭುತವಾಗಿ ಮೂಡಿಬಂದಿದೆ. ಇದಕ್ಕಾಗಿ ಆಲಿಯಾಗೆ ಬರೀ ಕೃತಜ್ಞತೆ ಹೇಳಿದರಷ್ಟೇ ಸಾಲದು ಎಂದು ನಿರ್ದೇಶಕ ಪುನೀತ್ ಅಭಿಪ್ರಾಯಪಟ್ಟಿದ್ದಾರೆ. 

Post Comments (+)