ಮಂಗಳವಾರ, ಅಕ್ಟೋಬರ್ 27, 2020
22 °C

78ನೇ ವಸಂತಕ್ಕೆ ಕಾಲಿಸಿರಿದ ಬಾಲಿವುಡ್ ಬಿಗ್ ಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ‘ಬಿಗ್‌ ಬಿ’ ಎಂದೇ ಕರೆಸಿಕೊಳ್ಳುವ ನಟ ಅಮಿತಾಬ್ ಇಂದು 78 ವರ್ಷಕ್ಕೆ ಕಾಲಿರಿಸಿದ್ದಾರೆ. 70ರ ದಶಕದಿಂದಲೂ ‘ದೀವಾರ’, ‘ಶೋಲೆ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದ್ದ ಅಮಿತಾಬ್‌ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಹೆಸರು. ಸಿನಿಮಾ ಕ್ಷೇತ್ರದಲ್ಲಿ 50 ಸಂವತ್ಸರಗಳನ್ನು ಪೂರೈಸಿರುವ ಅಮಿತಾಬ್‌ಗೆ‌ ಭಾರತೀಯ ಸಿನಿಮಾರಂಗದ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ. ನಟನೆ ಮಾತ್ರವಲ್ಲದೇ ನಿರೂಪಣೆ, ನಿರ್ಮಾಣ, ನಿರ್ದೇಶನ, ಗಾಯನ ಕ್ಷೇತ್ರದಲ್ಲೂ ಹೆಜ್ಜೆಗುರುತು ಮೂಡಿಸಿರುವ ಅಮಿತಾಬ್ ಇಂದಿಗೂ ಚಿರಯುವಕನಂತೆ ಉತ್ಸಾಹಿಯಾಗಿದ್ದಾರೆ.

ತಮ್ಮ ವಿಭಿನ್ನ ನಟನೆಯ ಮೂಲಕವೇ ಭಾರತೀಯ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಅಮಿತಾಬ್‌ ಸಿನಿಮಾಗಳೆಂದರೆ ಅಭಿಮಾನಿಗಳಲ್ಲಿ ಇಂದಿಗೂ ಅದೇ ಕ್ರೇಜ್‌. ಸದ್ಯ ಅಮಿತಾಬ್ ಕೈಯಲ್ಲಿ 5 ಸಿನಿಮಾಗಳಿವೆ. ಅವುಗಳಲ್ಲಿ ‘ಬ್ರಹ್ಮಾಸ್ತ್ರ’ ಕೂಡ ಒಂದು. ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಆಯನ್ ಮುಖರ್ಜಿ ನಿರ್ದೇಶಕ ಮಾಡುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ರಣಬೀರ್ ಕಪೂರ್‌, ಅಲಿಯಾ ಭಟ್‌ ಹಾಗೂ ಮೌನಿ ರಾಯ್ ನಟಿಸುತ್ತಿದ್ದಾರೆ. 

ಪ್ರಭಾಸ ನಟನೆ ಪ್ರಭಾಸ್ 21(ತಾತ್ಕಾಲಿಕ ಹೆಸರು) ಸಿನಿಮಾದಲ್ಲೂ ಅಮಿತಾಬ್ ಬಣ್ಣ ಹಚ್ಚಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು