ಮುಂಬೈ: ಇತ್ತೀಚೆಗೆ ಚಿತ್ರೀಕರಣ ಸಂದರ್ಭದಲ್ಲಿ ಆದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೂ ಕೆಲಸ ಆರಂಭಿಸಿರುವುದಾಗಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಶುಕ್ರವಾರ ತಿಳಿಸಿದ್ದಾರೆ.
ತಮ್ಮ ಆರೋಗ್ಯದ ಕುರಿತು ಅಧಿಕೃತ ಬ್ಲಾಗ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ದೇಹಕ್ಕೆ ಹಾನಿಯಾಗಿದ್ದರೂ ಚೇತರಿಕೆಯಾಗುವ ಆಸೆ ಮತ್ತು ಪ್ರಯತ್ನ ಮುಂದುವರಿದಿದೆ. ಕುಟುಂಬಸ್ಥರು, ಅಭಿಮಾನಿಗಳು, ಹಿತೈಷಿಗಳ ಕಾಳಜಿ ಮತ್ತು ಪ್ರೀತಿಯಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಪಕ್ಕೆಲುಬು ಮತ್ತು ಕಾಲಬೆರಳುಗಳಲ್ಲಿ ನೋವು ಇದೆ. ಆದಾಗ್ಯೂ ಕೆಲಸದ ವೇಳಾಪಟ್ಟಿ ಸಿದ್ಧವಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಹೈದರಾಬಾದ್‌ನಲ್ಲಿ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ಪಕ್ಕೆಲುಬು ಮುರಿದಿದೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ’ ಎಂದು ಬಚ್ಚನ್ ಮಾ.5ರಂದು ತಿಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.