ಶುಕ್ರವಾರ, ಸೆಪ್ಟೆಂಬರ್ 24, 2021
21 °C

1969ರ ಚಿತ್ರ ಹಂಚಿಕೊಂಡ ಅಮಿತಾಭ್‌ ಬಚ್ಚನ್‌: ಸೋನು ಸೂದ್‌ಗೆ ಹೋಲಿಸಿದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರು 50 ವರ್ಷಗಳ ಹಿಂದಿನ ಚಿತ್ರವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸೋನು ಸೂದ್‌ ಅವರನ್ನು ನೆನಪಿಸಿಕೊಂಡಿದ್ದಾರೆ.

1971ರಲ್ಲಿ ಬಿಡುಗಡೆಯಾದ 'ರೇಷ್ಮಾ ಔರ್‌ ಶೇರಾ' ಸಿನೆಮಾದ ಚಿತ್ರವೊಂದನ್ನು ಅಮಿತಾಭ್‌ ಭಾನುವಾರ ಹಂಚಿಕೊಂಡಿದ್ದಾರೆ. ರಾಜಸ್ಥಾನಿ ಉಡುಪಿನಲ್ಲಿ ಕಾಣಿಸಿಕೊಂಡಿರುವ ಅಮಿತಾಭ್‌ ಅವರು ತಲೆಯ ಮೇಲೆ ದೊಡ್ಡ ಪೇಟ, ಎರಡು ನೆಕ್ಲೇಸ್‌ ಮತ್ತು ಕಿವಿಯೋಲೆಗಳನ್ನು ಧರಿಸಿದ್ದಾರೆ.

'ರೇಷ್ಮಾ ಔರ್‌ ಶೇರಾ' ಸಿನೆಮಾಗೆ ನನ್ನ ನೋಟದ ಪರೀಕ್ಷೆ ನಡೆಯಿತು. 1969ರಲ್ಲಿ ನಾನು ನಿಜವಾಗಿ ಆಯ್ಕೆಯಾದೆ' ಎಂದು ಅಮಿತಾಭ್‌ ಫೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಅಮಿತಾಭ್‌ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಹೃದಯದ ಎಮೋಜಿಯನ್ನು ಹಾಕಿದ್ದಾರೆ. ನಟ ರಣವೀರ್ ಸಿಂಗ್ ಅವರು ಸ್ಟಾರ್ ಎಮೋಜಿ ಹಂಚಿಕೊಂಡಿದ್ದಾರೆ.

ಅಮಿತಾಭ್‌ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ಅವರ ಕೆಲ ಅಭಿಮಾನಿಗಳು ಮಾತ್ರ ನೀವು ಸೋನು ಸೂದ್ ಅವರಂತೆ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್‌ ಮಾಡಿದ್ದಾರೆ.

'ನಿಮ್ಮ ಚಿತ್ರವನ್ನು ಮೊದಲಿಗೆ ನೋಡಿದ ತಕ್ಷಣ ನಟ ಸೋನು ಸೂದ್‌ ಎಂಬುದಾಗಿ ಭಾವಿಸಿದ್ದೆ' ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು