ಮಂಗಳವಾರ, ಡಿಸೆಂಬರ್ 7, 2021
19 °C

ಆ್ಯಂಕರ್ ಅನಸೂಯ ಬಟ್ಟೆ ಬಗ್ಗೆ ಶ್ರೀನಿವಾಸ ರಾವ್ ಟೀಕೆ: ನಟಿ ತಿರುಗೇಟು ಹೀಗಿತ್ತು

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ಹಿರಿಯ ನಟ ಕೋಟ ಶ್ರೀನಿವಾಸ ರಾವ್‌ ಅವರು ನಿರೂಪಕಿ, ನಟಿ ಅನಸೂಯ ಭಾರದ್ವಾಜ್‌ ಅವರು ಧರಿಸಿದ್ಧ ಬಟ್ಟೆಯ ಬಗ್ಗೆ ಟೀಕಿಸಿದ್ದು, ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

ಇತ್ತೀಚಿಗೆ ಮನರಂಜನಾ ವಾಹಿನಿಗಳು ಪ್ರಸಾರ ಮಾಡುತ್ತಿರುವ ಹಾಸ್ಯ ಕಾರ್ಯಕ್ರಮಗಳ ಬಗ್ಗೆ ಕೋಟ ಶ್ರೀನಿವಾಸ ರಾವ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ತೆಲುಗು ‘ಈಟಿವಿ’ ವಾಹಿನಿಯ ‘ಜಬರ್ದಸ್ತ್​’ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಆ ಕಾರ್ಯಕ್ರಮ ನಿರೂಪಿಸುತ್ತಿರುವ ಅನಸೂಯ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಟೀಕಿಸಿದ್ದರು.

‘ಇದು ಹಾಸ್ಯ ಕಾರ್ಯಕ್ರಮ ಅಲ್ಲ. ಸರ್ಕಸ್​ ರೀತಿ ಕಾಣಿಸುತ್ತದೆ. ಅದನ್ನು ಸದ್ಯಕಷ್ಟೇ ಜನರು ವೀಕ್ಷಿಸುತ್ತಿರಬಹುದು. ಆದರೆ, ಹೆಚ್ಚು ಕಾಲ ನೋಡುವುದಿಲ್ಲ. ಅನಸೂಯ ಒಳ್ಳೆಯ ನಟಿ, ನಿರೂಪಕಿ. ಅವರಲ್ಲಿ ಪ್ರತಿಭೆ ಇದೆ. ಆದರೆ, ವೈಯಕ್ತಿಕವಾಗಿ ಅವರು ಬಟ್ಟೆ ಧರಿಸುವ ರೀತಿ ನನಗೆ​ ಇಷ್ಟವಾಗುವುದಿಲ್ಲ’ ಎಂದು ಶ್ರೀನಿವಾಸ ರಾವ್​ ಹೇಳಿದ್ದರು.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅನಸೂಯ, ‘ನಾನು ಧರಿಸುವ ಬಟ್ಟೆಯ ಬಗ್ಗೆ ಹಿರಿಯ ನಟರು ಟೀಕಿಸಿರುವುದು ಬೇಸರ ತರಿಸಿದೆ. ಯಾವ ರೀತಿ ಬಟ್ಟೆ ಧರಿಸಬೇಕು ಎಂಬುದು ಎಲ್ಲರ ವೈಯಕ್ತಿಕ ಆಯ್ಕೆಯಾಗಿದೆ. ಮದುವೆ-ಮಕ್ಕಳು ಆಗಿರುವ ನಟರೆಲ್ಲ ಶರ್ಟ್​ ಬಿಚ್ಚಿಕೊಂಡು ತೆರೆ ಮೇಲೆ ನಟಿಯರ ಜೊತೆ ರೊಮ್ಯಾನ್ಸ್​ ಮಾಡುವುದನ್ನು ಯಾಕೆ ಯಾರೂ ಕೂಡ ಪ್ರಶ್ನೆ ಮಾಡಿಲ್ಲ’ ಎಂದು​ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು