‘ಸೈ ರಾ ನರಸಿಂಹ ರೆಡ್ಡಿ’ಗೆ ಅನುಷ್ಕಾ ಶೆಟ್ಟಿ ಎಂಟ್ರಿ

ಬುಧವಾರ, ಮೇ 22, 2019
32 °C

‘ಸೈ ರಾ ನರಸಿಂಹ ರೆಡ್ಡಿ’ಗೆ ಅನುಷ್ಕಾ ಶೆಟ್ಟಿ ಎಂಟ್ರಿ

Published:
Updated:
Prajavani

‘ಭಾಗಮತಿ’ ಸಿನಿಮಾದ ನಂತರ ನಟಿ ಅನುಷ್ಕಾ ಶೆಟ್ಟಿ ಸಿನಿರಂಗದಿಂದ ಹೆಚ್ಚುಕಮ್ಮಿ ನಾಪತ್ತೆಯಾಗಿದ್ದರು.  ಅನುಷ್ಕಾ ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟಿ ಮುಂದಿನ ಸಿನಿಮಾ ಯಾವುದು ಬರಬಹುದೆಂಬ ಕಾತರದಲ್ಲೇ ಕಾಲ ಕಳೆಯುವಂತಾಗಿತ್ತು.  ಇದೀಗ ಅನುಷ್ಕಾ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಮೆಗಾಸ್ಟಾರ್ ಚಿರಂಜೀವಿ ಜೊತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಅನುಷ್ಕಾ ತಮ್ಮ ಪಾತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

2006ರಲ್ಲಿ ‘ಸ್ಟಾಲಿನ್’ ಸಿನಿಮಾದಲ್ಲಿ ಚಿರಂಜೀವಿ ಜೊತೆ ನಾಯಕಿಯಾಗಿ ಕಾಣಿಸಿಕೊಂಡ ಬರೋಬ್ಬರಿ 13 ವರ್ಷಗಳ ನಂತರ ಚಿರು ಜೊತೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಎ.ಆರ್. ಮುರುಗದಾಸ್ ನಿರ್ದೇಶಿಸುತ್ತಿರುವ ‘ಸೈ ರಾ...’ ಸಿನಿಮಾದ ಚಿತ್ರೀಕರಣಕ್ಕೆ ಶೀಘ್ರದಲ್ಲೇ ಸೇರಿಸಿಕೊಳ್ಳಲಿರುವ ಅನುಷ್ಕಾ, ‘ಬಾಹುಬಲಿ’, ‘ಬಿಲ್ಲಾ’, ‘ಅರುಂಧತಿ’, ‘ರುದ್ರಮ್ಮದೇವಿ’, ‘ಮಿರ್ಚಿ’, ‘ಜೀರೊ ಸೈಜ್’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.  

‘ಸೈ ರಾ...’ ಸಿನಿಮಾ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನಚರಿತ್ರೆ ಆಧಾರಿತ ವಾಗಿದ್ದು, 2018ರ ಆಗಸ್ಟ್‌ನಿಂದ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರವಲ್ಲದೇ ಅನುಷ್ಕಾ, ‘ಸೈಲೆನ್ಸ್’ ಅನ್ನುವ ತೆಲುಗು ಸಿನಿಮಾದಲ್ಲೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ನಂತರ ಸ್ವಾಮಿ ಅಯ್ಯಪ್ಪ ಕುರಿತ ಸಿನಿಮಾದಲ್ಲೂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ತೆಲುಗು ಚಿತ್ರರಂಗದ ಮೂಲಗಳು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !