‘ಕಿಸ್’ ಬಳಿಕ ಮತ್ತೆ ಒಂದಾಗಲಿದ್ದಾರೆ ಎಪಿ ಅರ್ಜುನ್ ಹಾಗೂ ವಿರಾಟ್

ಯುವ ಮನಸ್ಸಿಗೆ ಹತ್ತಿರವಾದ ‘ಕಿಸ್’ ಸಿನಿಮಾದ ಮೂಲಕ ನಾಯಕ ವಿರಾಟ್‌ರನ್ನು ಚಂದನವನಕ್ಕೆ ಪರಿಚಯಿಸಿದ್ದರು ನಿರ್ದೇಶಕ ಎಪಿ ಅರ್ಜುನ್. ಈ ಮತ್ತೆ ಜೋಡಿ ಒಂದಾಗಿ ಸಿನಿಮಾ ಮಾಡಲಿದೆ. ಹೊಸ ವರ್ಷದ ದಿನದಂದು ಈ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದಾರೆ ಅರ್ಜುನ್. ‘ಮತ್ತೆ ವಿರಾಟ್‌ನೊಂದಿಗೆ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಈ ತಿಂಗಳ ಅಂತ್ಯದಿಂದ ಪ್ರಾಜೆಕ್ಟ್ ಆರಂಭಿಸುವ ಯೋಚನೆ ಇದೆ. ಬೆಂಗಳೂರು, ಮಂಗಳೂರು, ನೈನಿತಾಲ್ ಹಾಗೂ ಊಟಿಯಲ್ಲಿ ಸಿನಿಮಾ ಚಿತ್ರೀಕರಣ ಮಾಡುವ ಯೋಚನೆ ಇದೆ. ನಾಯಕಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದಿದ್ದಾರೆ.
‘ಕಿಸ್ ಸಿನಿಮಾ ಯುವಜನರಿಗೆ ಹೆಚ್ಚು ಹತ್ತಿರವಾಗಿತ್ತು, ಆದರೆ ನನ್ನ ಮುಂದಿನ ಸಿನಿಮಾ ಅದಕ್ಕಿಂತ ತುಂಬಾ ಭಿನ್ನವಾಗಿದೆ. ಇದು ಆ್ಯಕ್ಷನ್ ಕಥೆಯುಳ್ಳ ಸಿನಿಮಾ. ಕಿಸ್ ಸಿನಿಮಾದಲ್ಲಿ ವಿರಾಟ್ ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಹಾಗಲ್ಲ. ಆ ಕಾರಣಕ್ಕೆ ಹೊಸ ಪಾತ್ರಕ್ಕಾಗಿ ವಿರಾಟ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ’ ಎಂದಿದ್ದಾರೆ.
ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಆಯೋಜಿಸಿದ್ದಾರೆ ನಿರ್ದೇಶಕ. ‘ಈ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ಮಾಡುವ ಯೋಜನೆ ಇದೆ. ಹಿಂದಿ ಹಾಗೂ ತೆಲುಗು ಆವೃತ್ತಿಯಲ್ಲೂ ಬಿಡುಗಡೆ ಮಾಡುವ ಬಗ್ಗೆ ಚಿಂತಿಸಿದ್ದೇವೆ’ ಎಂದಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.